ಬಾದಾಮಿಯಲ್ಲಿ ಸಿದ್ದರಾಮಯ್ಯನವರಿಗೆ ಉಚಿತ ಮನೆ ಆಫರ್‌ ನೀಡಿದ ಅಭಿಮಾನಿ !

ಬಾಗಲಕೋಟೆ : ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ನಾನು ಇಲ್ಲಿಯೇ ಮನೆ ಮಾಡಿ ನಿಮ್ಮ ಸೇವೆ ಮಾಡುತ್ತೇನೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅಭಿಮಾನಿಯೊಬ್ಬರು ಈಗ ಬಾದಾಮಿಯಲ್ಲಿ ಸಿದ್ದರಾಮಯ್ಯ ತಂಗಲು ಉಚಿತ ಮನೆ ಕೊಡಲು ಮುಂದಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ನೂತನ ಶಾಸಕ ಸಿದ್ದರಾಮಯ್ಯ ಮನೆ, ಕಚೇರಿ ಮಾಡೋದಾಗಿ ಈಗಾಗಲೇ ಹೇಳಿದ್ದರು. ಈ ಬೆನ್ನಲ್ಲೇ ಸಿದ್ದರಾಮಯ್ಯ ಅಭಿಮಾನಿ ಶಂಕರಗೌಡ ಕೆಳಗಿನಮನಿ ಎಂಬವರು ಉಚಿತ ಬಾಡಿಗೆ ಮನೆ ನೀಡಲು ಮುಂದೆ ಬಂದಿದ್ದಾರೆ.

ಬಾದಾಮಿಯ ಹೊಸಗೌಡರ ಕಾಲೋನಿಯ ಜಯನಗರದ ಮನೆ ಸುಸಜ್ಜಿತವಾಗಿದ್ಡು, ಡಬಲ್ ಬೆಡ್ ರೂಂ, ಡೈನಿಂಗ್ ಹಾಲ್, ಆಫೀಸ್ ರೂಂ, ಪೂಜಾ ಕೋಣೆ, ಕಾರ್ ಪಾರ್ಕಿಂಗ್ ಸೇರಿದಂತೆ ವಿಶಾಲ ಹೊರಾಂಗಣವನ್ನು ಹೊಂದಿದೆ.

 

ಈಗಾಗಲೇ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಮನೆ ನೋಡಿಕೊಂಡು ಹೋಗಿದ್ದು. ಐತಿಹಾಸಿಕ ಬಾದಾಮಿ ಅಭಿವೃದ್ಧಿ ಮಾಡಲಿ ಎನ್ನುವ ಮಹದಾಸೆ ಜೊತೆಗೆ ಮಾಜಿ ಸಿಎಂ ಎಂಬ ಕಾರಣಕ್ಕೆ ಉಚಿತ ಬಾಡಿಗೆ ಮನೆ ಆಫರ್ ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲದೆ ಇದಕ್ಕೆ ಸಿದ್ದರಾಮಯ್ಯ ಸಹ ಒಪ್ಪಿಗೆ ನೀಡಿರುವುದಾಗಿ ಹೇಳಲಾಗಿದೆ.

 

One thought on “ಬಾದಾಮಿಯಲ್ಲಿ ಸಿದ್ದರಾಮಯ್ಯನವರಿಗೆ ಉಚಿತ ಮನೆ ಆಫರ್‌ ನೀಡಿದ ಅಭಿಮಾನಿ !

 • June 18, 2018 at 2:51 PM
  Permalink

  Great brat ! I woulԁ lіke tߋ apprentice while you amend your website,
  how could i subscrіbe ffor a ᴡbloց websitе? The accountt aidsd
  me a applicable deal. I have been a little bit
  famiⅼiar off thios your broadcast offеred vibrɑnt
  transparent idea http://togelcroatiafip.wickforce.com/rajabandarq

  Reply

Leave a Reply

Your email address will not be published.