ಸಿದ್ದರಾಮಯ್ಯನವರ ಸೂಪರ್‌ ಸಿಎಂ ನಡತೆಗೆ ಕಾಂಗ್ರೆಸ್ಸಿಗರಲ್ಲೇ ಭುಗಿಲೆದ್ದ ಅಸಮಾಧಾನ

ಬೆಂಗಳೂರು : ರಾಜ್ಯಕ್ಕೆ ಹೊಸ ಬಜೆಟ್‌ನ ಅವಶ್ಯಕತೆ ಇಲ್ಲ. ಬೇಕಾದರೆ ಪೂರಕ ಬಜೆಟ್‌ನ್ನು ಸಿಎಂ ಕುಮಾರಸ್ವಾಮಿ ಮಂಡಿಸಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪಕ್ಷದಲ್ಲೇ ಅಸಮಾಧಾನ ಭುಗಿಲೆದ್ದಿದೆ.

ಸಿದ್ದರಾಮಯ್ಯ ವೈಯಕ್ತಿಕ ಪ್ರತಿಷ್ಠೆಗೆ ಬಿದ್ದಿದ್ದಾರೆ. ಇದರಿಂದಾಗಿ ಹೊಸ ಬಜೆಟ್​ ಮಂಡನೆಗೆ ಅಡ್ಡಿಮಾಡುತ್ತಿದ್ದಾರೆ. ಇದರಿಂದಾಗಿ ಮೈತ್ರಿ ಸರ್ಕಾರದಲ್ಲಿ ಗೊಂದಲ ಉಂಟಾಗುತ್ತಿದೆ. ಸಚಿವ ಸ್ಥಾನ ವಂಚಿತರ  ಸಮಾಧಾನ ಮಾಡಲು ಸಿದ್ದರಾಮಯ್ಯ ಮುಂದಾಗಿರಲಿಲ್ಲ. ತಾನೇ ಹೆಚ್ಚು ಎಂದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಅವರಿಗೆ ಬುದ್ದಿ ಹೇಳಲು ಹೈಕಮಾಂಡ್‌ಗೆ ಮಾತ್ರ  ಸಾಧ್ಯವಿದ್ದು, ಸದ್ಯ ಸಿದ್ದರಾಮಯ್ಯ ವಿಚಾರ ದೆಹಲಿಗೆ ತಲುಪುವ ಸಾಧ್ಯತೆ ಇದೆ.

ಈ ಕುರಿತು ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್‌ಗೆ ದೂರವಾಣಿ ಮೂಲಕ ದೂರು ನೀಡಿದ್ದು, ಯಾವುದೇ ರೀತಿ ವಿವಾದಾತ್ಮಕ ಹೇಳಿಕೆ ನೀಡದಂತೆ ತಿಳಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಾವು ಹೊಸ ಬಜೆಟ್ ಮಂಡನೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು.  ಈಗ ಪೂರಕ ಬಜೆಟ್​ ಸಾಕು ಎನ್ನುತ್ತಿದ್ದಾರೆ ಈ ಕುರಿತು ರಾಹುಲ್​ ಗಾಂಧಿಯೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com