WATCH : ಮೋದಿಯಿಂದಾಗಿ ಫಿಟ್‌ನೆಸ್ ಚಾಲೆಂಜ್ ಸ್ವೀಕರಿಸಿ ನೆಟ್ಟಿಗರ ಟ್ರೋಲಿಗೆ ಒಳಗಾದ ಈಶ್ವರಪ್ಪ

ಶಿವಮೊಗ್ಗ : ಪ್ರಧಾನಿ ಮೋದಿ ಫಿಟ್ ನೆಸ್ ಮಂತ್ರದಿಂದ ಪ್ರೇರಿತರಾಗಿರುವ ಬಿಜೆಪಿ ಮುಖಂಡ ಹಾಗೂ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಈಶ್ವರಪ್ಪ ಸಹ ಫಿಟ್ ನೆಸ್ ಕಡೆಗೆ ಗಮನ ಹರಿಸಿದ್ದಾರೆ.

ಇಷ್ಟು ದಿನ ಎಲೆಕ್ಷನ್ ಮೂಡ್‌ನಲ್ಲಿದ್ದ ಈಶ್ವರಪ್ಪ ಈಗ, ಅದರಿಂದ ಹೊರಬಂದಿದ್ದು, ಮೋದಿ  ಫಿಟ್ನೆಸ್ ಚಾಲೆಂಜ್‌ನಿಂದ ಪ್ರೇರಿತರಾಗಿ ತಾವೂ ವ್ಯಾಯಾಮ ಮಾಡಿ ಸುದ್ದಿಯಾಗಿದ್ದಾರೆ.

ಈಶ್ವರಪ್ಪ ಅವರ ಯೋಗ, ವಾಕಿಂಗ್, ಸ್ವಿಮ್ಮಿಂಗ್‌ನ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಹಮ್ ಫಿಟ್ ಹೈ ತೋ ಇಂಡಿಯಾ ಫಿಟ್ ಎನ್ನುವ ಮೂಲಕ ಈಶ್ವರಪ್ಪ ಫಿಟ್ ಆಗಿರುವ  ಪ್ರಯತ್ನ ನಡೆಸಿದ್ದಾರೆ.

ಆದರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈಶ್ವರಪ್ಪ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಿತ್ತ ಎನ್ನುವ ಮೂಲಕ ಈಶ್ವರಪ್ಪ ಅವರ ಕಾಲೆಳೆಯಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com