ಲೋಕೋಪಯೋಗಿ ಬಿಟ್ಟು ಬೇರೆ ಇಲಾಖೆಯಲ್ಲಿ ನನ್ನ ಹಸ್ತಕ್ಷೇಪ ಇಲ್ಲ : ಎಚ್.ಡಿ ರೇವಣ್ಣ ಸ್ಪಷ್ಟನೆ

ಹುಬ್ಬಳ್ಳಿಯಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿಕೆ ನೀಡಿದ್ದಾರೆ. ‘ ಪೂರ್ಣ ಬಜೆಟ್ ಅಥವಾ ಪೂರಕ ಬಜೆಟ್ ಬಗ್ಗೆ ನನ್ನ ಸಲಹೆ ಕೇಳಿದ್ರೆ ಹೇಳ್ತೀನಿ. ಸೂಪರ್ ಸಿಎಮ್ ಎಂದು ನನಗೆ ಪುಕ್ಕಟೆ ಪ್ರಚಾರ ಸಿಗುತ್ತಿದೆ. ನಾನು ಲೋಕೋಪಯೋಗಿ ಇಲಾಖೆ ಕೆಲಸ ಮಾತ್ರ ಮಾಡುತ್ತಿರೋದು ‘ ಎಂದಿದ್ದಾರೆ.

ಯಾರೂ ಧೃತಿಗೆಡಬೇಕಿಲ್ಲ, ಐದು ವರ್ಷ ನಾವೇ ಇರ್ತೀವಿ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಕೆಲಸ ಬಿಟ್ಟು ಬೇರೇನೂ ಮಾಡಿಲ್ಲ. ಆರ್‌ಡಿಪಿಆರ್ ಇಲಾಖೆಗೆ ಅಧಿಕಾರಿಗಳನ್ನು ನಾನು ಕೊಟ್ಟಿದೀನಿ. ಪೋಸ್ಟಿಂಗ್ ಮಾಡಿಕೊಳ್ಳುವುದು ಅವರಿಗೆ ಬಿಟ್ಟದ್ದು.
ನೀರಾವರಿ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಕಾಂಗ್ರೆಸ್ ಅಧ್ಯಕ್ಷರಿಗೆ ಬಹಿರಂಗವಾಗಿ ಹೇಳಿದ್ದೇನೆ‌. ಹಸ್ತಕ್ಷೇಪ ಮಾಡಿದ್ದೇನೆಂದು ಕಾಂಗ್ರೆಸ್ ಅಧ್ಯಕ್ಷರು ಕೇಳಿದರೆ ಉತ್ತರ ಕೊಡುತ್ತೇನೆ ‘ ಎಂದಿದ್ದಾರೆ.

ಡಿ.ಕೆ. ಶಿವಕುಮಾರ ಮತ್ತು ನಾನು ಚೆನ್ನಾಗಿದ್ದೀವಿ. ಸುಮ್ಮನೆ ನಮ್ಮ ನಡುವೆ ಜಗಳ ತಂದಿಡುವ ಕೆಲಸ ನಡೆಯುತ್ತಿದೆ. ಉನ್ನತ ಶಿಕ್ಷಣಕ್ಕೆ ಬಸವರಾಜ್ ಹೊರಟ್ಟಿಯವರ ಕೊಡುಗೆ ದೊಡ್ಡದಿದೆ. ಹೊರಟ್ಟಿಯವರು ನಮ್ಮ ನಾಯಕರು, ಯವ ಖಾತೆ ಕೊಟ್ಟರೂ ಅವರಿಗೆ ನಿರ್ವಹಿಸುವ ಸಾಮರ್ಥ್ಯವಿದೆ. ಹೊರಟ್ಟಿಯವರಿಗೆ ಸಚಿವ ಸ್ಥಾನ ಕೊಡುವಂತೆ ದೇವೇಗೌಡರು, ಕುಮಾರಸ್ವಾಮಿಯವರಿಗೆ ಕೇಳುತ್ತೇನೆ.
ರಂಗಪ್ಪರನ್ನು ಸಲಹೆಗಾರರಾಗಿ ನೇಮಕ ಮಾಡುವ ವಿಚಾರ ಸಿಎಮ್‌ಗೆ ಬಿಟ್ಟದ್ದು. ರೋಹಿಣಿ ಸಿಂಧೂರಿಯನ್ನು ಹಾಸನ ಜಿಲ್ಲಾಧಿಕಾರಿ ಮಾಡುವ ವಿಚಾರ ಸಿಎಮ್‌ ನೋಡಿಕೊಳ್ಳುತ್ತಾರೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com