WATCH : ತಮಾಷೆ ಮಾಡಲು ಹೋಗಿ ಜಲಪಾತದಿಂದ ಜಿಗಿದು ಪ್ರಾಣಬಿಟ್ಟ ಯುವಕ

ಗೋಕಾಕ್‌ : ಜಲಪಾತದಿಂದ ಹಾರಲು ಹೋಗಿ ವ್ಯಕ್ತಿಯೊಬ್ಬ ಸಾವಿಗೀಡಾಗಿರುವ ಘಟನೆ ಗೋಕಾಕ್‌ ಫಾಲ್ಸ್‌ನಲ್ಲಿ ನಡೆದಿದೆ. ಘಟಪ್ರಭಾದ ನಿವಾಸಿ ರಮಜಾನ್ ಹುಸ್ಮಾನ್ ಕಾಜಿ (35) ಎಂದು ಹೆಸರಿಸಲಾಗಿದೆ.

ರಂಜಾನ್ ಹಬ್ಬ ಆಚರಿಸುವ ಸಲುವಾಗಿ ಹುಸ್ಮಾನ್ ಸ್ನೇಹಿತರೊಂದಿಗೆ ಆಗಮಿಸಿದ್ದು,  ಗೋಕಾಕ್‌ ಫಾಲ್ಸ್‌ನಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ತಮಾಷೆ ಮಾಡಲು ಹೋಗಿ ಜಲಪಾತದಿಂದ ಕೆಳಗೆ ಜಿಗಿದಿದ್ದು, ಆ ಕಸ್ಮಿಕವಾಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾರೆ. ಹುಸ್ಮಾನ್‌ ಜಲಪಾತದಿಂದ ಕೆಳಗೆ ಹಾರುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಗೋಕಾಕ್‌ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com