FIFA 2018 : ಮಿಸ್ಸಾಯ್ತು ಮೆಸ್ಸಿ ಪೆನಾಲ್ಟಿ ಕಿಕ್ : ಅರ್ಜೆಂಟೀನಾ-ಐಸ್ಲ್ಯಾಂಡ್ ಪಂದ್ಯ ಡ್ರಾ

ಸ್ಪಾರ್ಟಾಕ್ ಕ್ರೀಡಾಂಗಣದಲ್ಲಿ ಶನಿವಾರ ಅರ್ಜೆಂಟೀನಾ ಹಾಗೂ ಐಸ್ಲ್ಯಾಂಡ್ ತಂಡಗಳ ನಡುವೆ ನಡೆದ ‘ಡಿ’ ಲೀಗ್ ಪಂದ್ಯ 1-1 ಡ್ರಾನಲ್ಲಿ ಅಂತ್ಯ ಕಂಡಿದೆ. ಮೊದಲ ಬಾರಿಗೆ ವಿಶ್ವಕಪ್ ಆಡುವ ಅರ್ಹತೆ ಪಡೆದ ಐಸ್ಲ್ಯಾಂಡ್ ಬಲಿಷ್ಠ ಅರ್ಜೆಂಟೀನಾ ವಿರುದ್ಧ ‘ಡ್ರಾ’ ಮಾಡಿಕೊಳ್ಳುವಲ್ಲಿ ಸಫಲವಾಗಿದೆ.

ಮೊದಲರ್ಧದ 19ನೇ ನಿಮಿಷದಲ್ಲಿ ಅರ್ಜೆಂಟೀನಾದ ಸರ್ಜಿಯೋ ಆಗ್ಯುರೋ ಗೊಲ್ ದಾಖಲಿಸಿ ಮುನ್ನಡೆ ತಂದು ಕೊಟ್ಟರು. ಆದರೆ 23ನೇ ನಿಮಿಷದಲ್ಲಿ ಐಸ್ಲ್ಯಾಂಡ್ ತಂಡದ ಫಿನ್ ಬೊಗಾಸನ್ ಬಾರಿಸಿದ ಗೋಲ್ ನಿಂದ ಸ್ಕೋರ್ 1-1 ಸಮವಾಯಿತು. ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಪಂದ್ಯದ 64ನೇ ನಿಮಿಷದಲ್ಲಿ ದೊರಕಿದ್ದ ಪೆನಾಲ್ಟಿ ಕಿಕ್ ಅನ್ನು ಗೋಲ್ ಆಗಿ ಪರಿವರ್ತಿಸಲು ವಿಫಲರಾದರು.

Image result for messi penalty Iceland fifa 2018

ಫಿಫಾ ವಿಶ್ವಕಪ್ – 2018 ಟೂರ್ನಿಯಲ್ಲಿ ಶನಿವಾರ ನಡೆದ ‘ಸಿ’ ಗುಂಪಿನ ಲೀಗ್ ಪಂದ್ಯದಲ್ಲಿ ಫ್ರಾನ್ಸ್, ಆಸ್ಟ್ರೇಲಿಯಾ ವಿರುದ್ಧ 2-1 ಗೋಲುಗಳ ಅಂತರದಿಂದ ಜಯಗಳಿಸಿದೆ. ಶನಿವಾರವೇ ನಡೆದ ಮತ್ತೊಂದು ‘ಸಿ’ ಗುಂಪಿನ ಲೀಗ್ ಪಂದ್ಯದಲ್ಲಿ ಡೆನ್ಮಾರ್ಕ್ ಪೆರು ವಿರುದ್ಧ 1-0 ಗೋಲ್ ಗಳ ಅಂತರದ ಗೆಲುವು ಸಾಧಿಸಿದೆ.

ಭಾನುವಾರ ನಡೆದ ‘ಡಿ’ ಗುಂಪಿನ ಲೀಗ್ ಪಂದ್ಯದಲ್ಲಿ ಕ್ರೊವೇಶಿಯಾ ತಂಡ, ನೈಜೀರಿಯಾ ವಿರುದ್ಧ 2-0 ಗೋಲುಗಳ ಅಂತರದ ಜಯ ಸಾಧಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com