ಖೋಟಾನೋಟು ಪ್ರಕರಣದಲ್ಲಿ ಬಿಜೆಪಿ ಕೈವಾಡ : ಕಮಲ ನಾಯಕರ ವಿರುದ್ದ ಹರಿಹಾಯ್ದ ಅನ್ಸಾರಿ

ಕೊಪ್ಪಳ : ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. 2013 ರ ಚುನಾವಣೆಯಿಂದಲೇ ಜನರಿಗೆ, ಮುಖಂಡರಿಗೆ ಬಿಜೆಪಿಯವರು ಖೋಟಾ ನೋಟು ಸರಬರಾಜು ಮಾಡಿದ್ದರು. ಈ ಹಿಂದೆಯೂ ಶಾಸಕ ಪರಣ್ಣ ಮುನ್ನವಳ್ಳಿಗೆ ಬೆದರಿಕೆ ಕರೆ ಬಂದಿತ್ತು. ಈಗಲೂ ಸಹ ಅವರಿಗೆ ಬೆದರಿಕೆ ಕರೆ ಬಂದಿದೆ. ಅವರಿಗೆ ಯಾಕೆ ಕರೆ ಬಂದಿದೆ ಎಂದು ಇಕ್ಬಾಲ್ ಅನ್ಸಾರಿ ಪ್ರಶ್ನೆ ಮಾಡಿದ್ದಾರೆ.

ಇದರಲ್ಲಿ ಯಾರ್ಯಾರ ಕೈವಾಡ ಇದೆ ಎಂಬುದನ್ನ ಪೋಲಿಸ್ ಇಲಾಖೆ ತನಿಖೆ ನಡೆಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿರುವ ಅನ್ಸಾರಿ, ಪೋಲಿಸರಿಗೆ ನೈತಿಕತೆ ಇದ್ರೆ, ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಖೋಟಾ ನೋಟು ಪ್ರಕರಣದಲ್ಲಿ ಬಿಜೆಪಿಯವರು ಇನ್ವಾಲ್ ಆಗಿದ್ದಾರೆ. ಪರಣ್ಣ ಮುನವಳ್ಳಿಗೆ ಯಾರು ಕರೆ ಮಾಡಿದ್ರು ಅವರನ್ನ ಮೊದಲು ಪತ್ತೆ ಹಚ್ಚುವ ಕೆಲಸ ಮಾಡಲಿ. ಸಣ್ಣ ಪುಟ್ಟ ಅಪರಾಧಿಗಳನ್ನು ಹಿಡಿದು ದಾರಿ ತಪ್ಪಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಬಿಜೆಪಿಯವರು ಖೋಟಾ ನೋಟಿನ ಪ್ರಕರಣವನ್ನ ಬೇರೆಡೆ ಸೆಳೆಯಲು ಎಂಆರ್ ಪಿ, ಎಂಆರ್ ಪಿ ಅಂತಿದ್ದಾರೆ.ಈ ಎಂಆರ್ ಪಿ ಏನಿದೆ ರಾಜ್ಯದ ವಿಷಯ, ಇದು ದೇಶದ್ರೋಹಿ ಕೆಲಸ ಅಲ್ಲ, ವ್ಯಾಪಾರದ ಕೆಲಸ. ಇದರ ಬಗ್ಗೆ ಚರ್ಚೆ ಮಾಡೋಕೆ ಸರ್ಕಾರ ಇದೆ. ಅಧಿಕಾರಿಗಳು ಇದ್ದಾರೆ ಅವರು ನೋಡ್ಕೋತಾರೆ. ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ. ಕೇವಲ ಅನ್ಸಾರಿಗೆ ಮಾತ್ರ ಅಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com