ಟ್ರಂಪ್‌ಗೆ ಸರಿಯಾಗಿ ತಿರುಗೇಟು ನೀಡಿದ ಮೋದಿ : ಅಮೆರಿಕದ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಿಸಿದ ಕೇಂದ್ರ

ದೆಹಲಿ : ಭಾರತದಲ್ಲಿ ಸುಂಕವಿಲ್ಲದೆ ಮಾರಾಟ ಮಾಡಲಾಗುತ್ತಿದ್ದ ಉತ್ಪನ್ನಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಭಾರತ ರದ್ದುಗೊಳಿಸಿದ್ದು, ಕೆಲ ಉತ್ಪನ್ನಗಳಿಗೆ ಸುಂಕ ವಿಧಿಸಿದೆ.

ಜೂನ್‌ 14ರಂದು ವಿಶ್ವವ್ಯಾಪಾರ ಸಂಸ್ಥೆಗೆ ಭಾರತ ಪತ್ರ ಬರೆದಿದ್ದು, ಈ ಪತ್ರದ ಮೂಲಕ ಅಮೆರಿಕಾದಿಂದ ಆಮದು ಮಾಡಲಾಗುತ್ತಿರುವ ಉತ್ಪನ್ನಗಳಿಗೆ ನಿಡಲಾದ ತೆರಿಗೆ ವಿನಾಯಿತಿಯನ್ನು ರದ್ದುಗೊಳಿಸಿರುವುದಾಗಿ ತಿಳಿಸಿದೆ. ಅಲ್ಲದೆ, ಭಾರತದ ಉತ್ಪನ್ನಗಳ ಮೇಲೆ ವಿಧಿಸಲಾದ ಸುಂಕದ ಅನುಪಾತಕ್ಕನುಗುಣವಾಗಿ ಸುಂಕ ವಿಧಿಸುವುದಾಗಿ ತಿಳಿಸಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮಾರ್ಚ್​ 9 ರಂದು ಅಲ್ಯೂಮಿನಿಯಂ ಹಾಗೂ ಸ್ಟೀಲ್​ಗೆ ಭಾರೀ ಪ್ರಮಾಣದ ಸುಂಕ ವಿಧಿಸಿದ್ದರು. ಈ ಕುರಿತಾಗಿ ಮಾತನಾಡಿದ್ದ ಡೊನಾಲ್ಡ್​ ಟ್ರಂಪ್ ಭಾರತದಿಂದ ಆಮದು ಮಾಡಿಕೊಳ್ಳುವ ಸ್ಟೀಲ್​ ಮೇಲೆ ಶೇ. 25 ಹಾಗೂ ಅಲ್ಯೂಮಿನಿಯಂ ಮೇಲೆ ಶೇ. 10 ರಷ್ಟು ಹೆಚ್ಚುವರಿ ಸುಂಕ ವಿಧಿಸಿರುವುದಾಗಿ ಹೇಳಿದ್ದರು. ಕೇವಲ ಕೆನಡಾ ಹಾಗೂ ಮೆಕ್ಸಿಕೋಗಳಿಗಷ್ಟೇ ಈ ಹೆಚ್ಚುವರಿ ಸುಂಕದಿಂದ ವಿನಾಯಿತಿ ನೀಡಲಾಗಿತ್ತು. ಇದು 2018 ಜೂನ್ 21 ಜಾರಿಯಾಗಲಿದೆ.


ಭಾರತ ತೆರಿಗೆ ವಿಧಿಸಿರುವ ಉತ್ಪನ್ನಗಳು

800 ಸಿಸಿಗಿಂತಲೂ ಹೆಚ್ಚಿನ ಕ್ಷಮತೆಯುಳ್ಳ ಬೈಕ್​ಗಳು, ಸೇಬು ಹಾಗೂ ಬಾದಾಮಿಯಂತಹ ಉತ್ಪನ್ನಗಳ ಮೇಲಿನ ಸುಂಕ ಹೆಚ್ಚಳ.

ಈ ಹೊಸ ನಿರ್ಧಾರದ ಅನ್ವಯ ಅಮೆರಿಕಾದಿಂದ ಆಮದು ಮಾಡುವ 800 ಸಿಸಿ ಬೈಕ್​ಗಳ ಮೇಲೆ ಶೇ. 50 ರಷ್ಟು ಸುಂಕ, ಬಾದಾಮಿ ಮೇಲೆ ಶೇ. 20, ಶೇಂಗಾಕ್ಕೆ ಶೇ. 20 ಹಾಗೂ ಸೇಬುಗಳ ಮೇಲೆ ಶೇ. 25 ರಷ್ಟು ಸುಂಕ.

ಅಕ್ರೂಟ್​ ಮೇಲಿನ ಆಮದು ಸುಂಕ ಶೇ. 30 ರಿಂದ ಶೇ. 100ಕ್ಕೇರಿಕೆ. ಇದನ್ನು ಹೊರತುಪಡಿಸಿ ಬಾದಾಮಿ ಮೇಲಿನ ಆಮದು ಸುಂಕ ಕಿಲೋ ಒಂದಕ್ಕೆ 65 ರಿಂದ 100 ರೂಪಾಯಿ ಏರಿಕೆ.

Leave a Reply

Your email address will not be published.

Social Media Auto Publish Powered By : XYZScripts.com