ಕೇಜ್ರಿವಾಲ್‌ಗೆ HDK ಸಾಥ್‌ : ಮೋದಿ ವಿರುದ್ಧ ತೊಡೆತಟ್ಟಿದ ಸ್ಥಳೀಯ ಪಕ್ಷದ ನಾಯಕರು

ದೆಹಲಿ : ಲೆಫ್ಟಿನಂಟ್‌ ಗವರ್ನರ್‌ ವಿರುದ್ಧ ದೆಹಲಿ ಸಿಎಂ ಕೇಜ್ರಿವಾಲ್‌ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಿಎಂ ಕುಮಾರಸ್ವಾಮಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಅನೇಕರು ಬೆಂಬಲ ಸೂಚಿಸಿದ್ದಾರೆ.

ಮೋದಿ ನೇತೃತ್ವದಲ್ಲಿ ಇಂದು ನೀತಿ ಆಯೋಗದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಭಾಗವಹಿಸಲು ತೆರಳಿದ್ದ ಸ್ಥಳೀಯ ಪಕ್ಷಗಳ ನಾಯಕರು ಕೇಜ್ರಿವಾಲ್ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಕರ್ನಾಟಕ ಸಿಎಂ ಕುಮಾರಸ್ವಾಮಿ ಅವರು ಮಾತಾಡುತ್ತ, ನಾವು ಕೇಜ್ರಿವಾಲ್​ ಅವರ ಹೋರಾಟವನ್ನು ಬೆಂಬಲಿಸುತ್ತಿದ್ದೇವೆ. ಕೂಡಲೇ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರು ಆಪ್​ ಸರ್ಕಾರದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಇದೆ ವೇಳೆ ಪ್ರಧಾನಿ ವಿರುದ್ಧ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕೂಡ ಕಿಡಿಕಾರಿದರು.
ಪ್ರಧಾನಿ ಮೋದಿ ಕೂಡಲೇ ಎಚ್ಚೆತ್ತುಕೊಂಡು ಐಎಎಸ್​ ಅಧಿಕಾರಿಗಳ ಮುಷ್ಕರವನ್ನು ನಿಲ್ಲಿಸುವಂತೆ ಸೂಚಿಸಬೇಕು. ನಾವು ನಾಲ್ಕು ಜನ ಕೇಜ್ರಿವಾಲ್​ ಅವರನ್ನು ಬೆಂಬಲಿಸುತ್ತೇವೆ. ದೆಹಲಿಯ ಸ್ಥಿತಿಯೇ ಇಷ್ಟು ಕೆಟ್ಟದಾಗಿದ್ದರೆ, ನಮ್ಮ ರಾಜ್ಯಗಳ ಪರಿಸ್ಥಿತಿ ಏನಾಗಬೇಡ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು. ಲೆಫ್ಟಿನೆಂಟ್​ ಗವರ್ನರ್​​ ಅವರು ಕೇಂದ್ರ ಸರ್ಕಾರದ ಕೈಗೊಂಬೆಯಲ್ಲ, ಸಾಂವಿಧಾನಿಕವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರು ಸಮಸ್ಯೆಗಳಿಗೆ ಸ್ಪಂದಿಸಬೇಕು. ನಾವು ನಾಳೆ ಮೋದಿ ಅವರ ಬಳಿ ಈ ಕುರಿತು ಚರ್ಚಿಸುತ್ತೇವೆ. ಕೇಜ್ರಿವಾಲ್​ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಈ ಸಮಸ್ಯೆಗಳು ಬಗೆಹರಿಯುವ ತನಕ ಜೊತೆ ನಿಲ್ಲುವುದಾಗಿ ಹೇಳಿದ್ದಾರೆ.

ಒಂದು ವಾರದಿಂದ ಲೆಫ್ಟಿನೆಂಟ್ ಗವರ್ನರ್ ಕಛೇರಿಯಲ್ಲಿ ಕೇಜ್ರಿವಾಲ್​ ತಮ್ಮ ಮೂವರು ಕ್ಯಾಬಿನೆಟ್ ಸಚಿವರ ಜೊತೆ ಸತ್ಯಾಗ್ರಹ ನಡೆಸುತ್ತಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ವಿರುದ್ಧ ಆರನೇ ದಿನದ ಧರಣಿ ಮುಂದುವರಿಸಿದ್ದು, ಇದೀಗ ಪ್ರಾದೇಶಿಕ ಪಕ್ಷಗಳ ನಾಯಕರು ಬೆಂಬಲ ಸೂಚಿಸಿವೆ.

Leave a Reply

Your email address will not be published.

Social Media Auto Publish Powered By : XYZScripts.com