ಕೇಜ್ರಿವಾಲ್‌ ಒಬ್ಬ ನಕ್ಸಲೇಟ್ ಇದ್ದಂತೆ, ಅವರಿಗ್ಯಾಕೆ HDK ಸಪೋರ್ಟ್ ಮಾಡಬೇಕು : ಸುಬ್ರಮಣಿಯನ್ ಸ್ವಾಮಿ

ದೆಹಲಿ : ಹಲವು ಬೇಡಿಕೆಗಳಿಗಾಗಿ ದೆಹಲಿ ಲೆಫ್ಟಿನೆಂಟ್‌  ಗವರ್ನರ್‌ ನಿವಾಸದ ಬಳಿ ಪ್ರತಿಭಟನೆ ನಡೆಸುತ್ತಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ರನ್ನು ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ನಕ್ಸಲೈಟ್ ಎಂದಿದ್ದಾರೆ.

ಈ ಕುರಿತು ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನಕ್ಸಲೈಟ್ ಇದ್ದಂತೆ. ಅವರಿಗೆ ಕರ್ನಾಟಕದ ಸಿಎಂ ಕುಮಾರಸ್ವಾಮಿ, ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ನಾಯಕರು ಯಾಕೆ ಬೆಂಬಲ ನೀಡಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ದೆಹಲಿಯಲ್ಲಿ ಕಳೆದ ಒಂದು ವಾರದಿಂದ  ಕೇಜ್ರಿವಾಲ್‌ ನೇತೃತ್ವದ ತಂಡ, ಐಎಎಸ್​ ಅಧಿಕಾರಿಗಳು ನಡೆಸುತ್ತಿರುವ ಮುಷ್ಕರಕ್ಕೆ ಅಂತ್ಯ ಹಾಡುವಂತೆ, ಪಡಿತರವನ್ನು ನಾಗರಿಕರ ಮನೆ ಬಾಗಿಲಿಗೆ ತಲುಪಿಸುವ ಯೋಜನೆಗೆ ಒಪ್ಪಿಗೆ ನೀಡುವಂತೆ ಒತ್ತಾಯಿಸಿ ಲೆಫ್ಟಿನೆಂಟ್​ ಗವರ್ನರ್​ ಅವರ ನಿವಾಸದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರಿಗೆ ಇಂದು ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರು ಸಾಥ್ ನೀಡಿದ್ದು, ಮೋದಿ ವಿರುದ್ಧ ಸಿಡಿದೆದ್ದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com