FIFA 2018 : ಬ್ರೆಜಿಲ್ – ಸ್ವಿಟ್ಜರ್ಲೆಂಡ್ ಮುಖಾಮುಖಿ : ನೆಯ್ಮರ್ ಮೇಲೆ ಎಲ್ಲರ ಕಣ್ಣು

5 ಬಾರಿಯ ವಿಶ್ವಚಾಂಪಿಯನ್ ಬ್ರೆಜಿಲ್ ಫಿಫಾ ವಿಶ್ವಕಪ್-2018 ಟೂರ್ನಿಯಲ್ಲಿ ಭಾನುವಾರ ತನ್ನ ಮೊದಲ ಪಂದ್ಯವನ್ನಾಡಲಿದೆ. ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಗಳಲ್ಲಿ ಒಂದಾಗಿರುವ ಬ್ರೆಜಿಲ್, ಭಾನುವಾರ ರೊಸ್ಟೋವ್ ಅರೆನಾದಲ್ಲಿ ನಡೆಯಲಿರುವ ‘ಇ’ ಗುಂಪಿನ ಲೀಗ್ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ತಂಡವನ್ನು ಎದುರಿಸಲಿದೆ.

ಬ್ರೆಜಿಲ್ ತಂಡದ ಪ್ರಮುಖ ಸ್ಟ್ರೈಕರ್ ಎನಿಸಿಕೊಂಡಿರುವ ನೆಯ್ಮರ್ ಜೂನಿಯರ್ ಪಂದ್ಯದ ಆಕರ್ಷಣೆಯ ಕೇಂದ್ರವಾಗಿದ್ದಾರೆ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ 11.30ಕ್ಕೆ ಪ್ರಾರಂಭವಾಗಲಿದೆ.

ಕಳೆದ ಬಾರಿ ಬ್ರೆಜಿಲ್ ನಡೆದಿದ್ದ ವಿಶ್ವಕಪ್ ನಲ್ಲಿ ಚಾಂಪಿಯನ್ ಆಗಿದ್ದ ಜರ್ಮನಿ ಕೂಡ ರವಿವಾರ ತನ್ನ ಮೊದಲ ಲೀಗ್ ಪಂದ್ಯವನ್ನಾಡಲಿದ್ದು, ಮೆಕ್ಸಿಕೊ ತಂಡವನ್ನು ಎದುರಿಸಲಿದೆ. ಭಾರತೀಯ ಕಾಲಮಾನದಂತೆ 8.30ರಿಂದ ಲುಝ್ನಿಕಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಶುಭಾರಂಭ ಮಾಡುವ ತವಕದಲ್ಲಿವೆ.

ರಷ್ಯಾದ ಸಮಾರಾ ನಗರದ ಕಾಸ್ಮೋಸ್ ಅರೆನಾ ಕ್ರೀಡಾಂಗಣದಲ್ಲಿ ಭಾನುವಾರ ಕೋಸ್ಟರಿಕಾ ಹಾಗೂ ಸರ್ಬಿಯಾ ತಂಡಗಳ ನಡುವೆ ‘ಇ’ ಗುಂಪಿನ ಲೀಗ್ ಪಂದ್ಯ ನಡೆಯಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com