ಸೇವೆ ಪದವನ್ನು ಅಪಾರ್ಥ ಮಾಡಿಕೊಳ್ಳಬೇಡಿ : ಜಯಮಾಲಾಗೆ ಲಕ್ಷ್ಮಿ ಹೆಬ್ಬಾಳ್ಕರ್‌ ಕಿವಿಮಾತು

ಬೆಳಗಾವಿ : ಕಾಂಗ್ರೆಸ್‌ನಲ್ಲಿ ನಟಿ ಜಯಮಾಲಾ ಅವರಿಗೆ ಸಚಿವ ಸ್ಥಾನ ನೀಡಿರುವ ಹಿನ್ನೆಲೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಕಾಂಗ್ರೆಸ್ ಪಕ್ಷಕ್ಕೆ  ಜಯಮಾಲಾ ಅವರ ಸೇವೆ ಇಷ್ಟವಾಗಿರಬೇಕು. ಆದ್ದರಿಂದ ಅವರಿಗೆ ಸಚಿವೆ ಸ್ಥಾನ ನೀಡಿರಬಹುದು ಎಂದಿದ್ದರು.

ಆದರೆ ಜಯಮಾಲಾ, ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ  ಲಕ್ಷ್ಮೀ ಹೆಬ್ಬಾಳ್ಕರ್‌, ಸೇವೆ ಪದ ಅನರ್ಥ ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸೇವೆ ಅಂದರೆ ಪಕ್ಷದ ಕೆಲಸ ಎಂದರ್ಥ. ಈ ಅರ್ಥದಲ್ಲಿ ನಾನು ಸೇವೆ ಎಂಬ‌ ಪದ ಬಳಸಿದ್ದೆ. ಅದಕ್ಕೆ ಸಚಿವರು ತಪ್ಪು ಅರ್ಥ ಮಾಡಿಕೊಳ್ಳಬಾರದು. ಪಕ್ಷದ ಚಟುವಟಿಕೆಗಳಲ್ಲಿ ಇಬ್ಬರು ಕೂಡಿ ಸಾಕಷ್ಟು ಕೆಲಸ ಮಾಡಿದ್ದೇವೆ. ಪಕ್ಷದ ಯಾವುದೇ ಕೆಲಸ ಇದ್ದರೂ ಮೊದಲು ನಾನು ಕಾಲ್ ಮಡುತ್ತಿದ್ದದ್ದೇ ಜಯಮಾಲಾ ಅವರಿಗೆ. ಅವರು ನಮ್ಮ ಸಹೋದರಿ ಇದ್ದಂತೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com