ಬಜೆಟ್‌ ಮಂಡನೆ ಮಾಡೋದು ಮುಖ್ಯಮಂತ್ರಿಯ ಪರಮಾಧಿಕಾರ : ಸಿದ್ದರಾಮಯ್ಯಗೆ ರೇವಣ್ಣ ತಿರುಗೇಟು

ಬೆಳಗಾವಿ :  ಸರ್ಕಾರ‌ ರಚನೆಯಾದ ಬಳಿಕ ಬಜೆಟ್ ಮಂಡಿಸುವುದು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಲೋಕೋಪಯೋಗಿ ಸಚಿವ ಎಚ್. ಡಿ. ರೇವಣ್ಣ ಹೇಳಿದ್ದಾರೆ.


ಮಳೆ ಹಾನಿ ಕುರಿತು ಬೆಳಗಾವಿಯಲ್ಲಿ ಭಾನುವಾರ ಅಧಿಕಾರಿಗಳ ಸಭೆ ನಡೆಸಿ ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಪೂರ್ಣಾವಧಿ ಮುಖ್ಯಮಂತ್ರಿ. ‌ಬಜೆಟ್ ಮಂಡಿಸುವ ಅಧಿಕಾರ ಅವರಿಗಿದೆ.
ಬಜೆಟ್ ಮಂಡಿಸುತ್ತಾರೋ? ಇಲ್ಲವೋ ಎಂಬುವುದನ್ನು ಸಿಎಂ ಕುಮಾರಸ್ವಾಮಿ ಬಳಿ ಕೇಳಿ. ನಾನು ಇದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ವ್ಯಾಪ್ತಿಗೆ ಈ ವಿಚಾರ ಬರುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com