ನಂದು ಬದಲಾಗೋ ರಕ್ತ ಅಲ್ಲ, ಅಂತ ಅಮ್ಮನ ಹೊಟ್ಟೆಯಲ್ಲಿ ನಾನು ಹುಟ್ಟಿಲ್ಲ : ಅನಂತ್‌ ಕುಮಾರ್‌ ಹೆಗಡೆ

ಬೆಂಗಳೂರು : ಬನಶಂಕರಿಯ ಭಾನು ನೆನಪಿನ ನಾಣಿ ಸಭಾಂಗಣದಲ್ಲಿ  ಸಾವರ್ಕರ್ ಅವರ ಹಿಂದುತ್ವ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆ ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಮೂರ್ಖತೆಯನ್ನೇ ಹೊತ್ತಿರುವ ಬುದ್ದಿ ಜೀವಿಗಳು ,ಇವತ್ತು ಅವರ ಬುದ್ದಿಯನ್ನ ಮಾರಾಟಕ್ಕೆ ಇಟ್ಟಿದ್ದಾರೆ. ಅವರು ಬಣ್ಣ ಹಚ್ಚಿದಾಗ ಮಾತ್ರ ನೋಡಲು ಸಾಧ್ಯ. ಬಣ್ಣ ಕಳಚಿದರೆ ನೀವು ಅವರ ಮುಖ ನೋಡಲು ಸಾಧ್ಯವಿಲ್ಲ ಎಂದಿದ್ದಾರೆ.

ಬುದ್ದಿಜೀವಿಗಳು ಈ ಹಿಂದುತ್ವವನ್ನು ಒಪ್ಪುವುದಿಲ್ಲ. ಸಾವರ್ಕರ್ ಆರಾಧನೆ ವಿಚಾರವೇ ಹಿಂದುತ್ವ. ಎಲ್ಲಿಂದಲೇ ಒಂದಿಷ್ಡು ಓದಿಕೊಂಡು‌ ಇವತ್ತು ಪಿಎಚ್ ಡಿ ಮಾಡ್ತಾರಲ್ಲ ಅದು ಕಾಪಿ ಪೇಸ್ಟ್ ಅಷ್ಟೇ. ಅದನ್ನು ಸಾವರ್ಕರ್ ಮಾಡಲ್ಲ. ತಾಯಿಯ ಕುಲವೇ ನಮ್ಮ ಕುಲ ಅಂತಾ ಹಿಂದೂಗಳು ಮಾತ್ರವೇ ಹೇಳಬಲ್ಲರು. ಮಣ್ಣಿನ ಬದುಕನ್ನು ತೋರಿಸುವುದೇ ಹಿಂದುತ್ವ. ಹಿಂದುತ್ವವನ್ನು ಚಿಕ್ಕದು ಮಾಡುವ ಪ್ರಯತ್ನ ಯಾರೂ ಮಾಡಬಾರದು. ವಿದೇಶಿ ಬಂಡವಾಳಕ್ಕೆ ತಮ್ಮನ್ನು ಮಾರಿಕೊಂಡಿರುವ ಬುದ್ದಿಜೀವಿಗಳು ಮಾಡುತ್ತಿರುವ ಪ್ರಯತ್ನವನ್ನು ನಾವು ಖಂಡಿಸಬೇಕು ಎಂದಿದ್ದಾರೆ.

ಜಾತಿಯಿಂದ ಹುಟ್ಟಿದ್ದಾರೆ ಅಂತಾ ನಾವು ಯಾವತ್ತೂ ಗೌರವ ಕೊಟ್ಟಿಲ್ಲ.  ಅವರ ಮೇಲ್ಪಂಕ್ತಿಗೆ ಗೌರವ ಕೊಡುತ್ತೇವೆ. ಸತ್ಯವನ್ನು ಒಪ್ಪಿಕೊಳ್ಳುವ ಸತ್ಯದ ಆರಾಧನೆಯೇ ಹಿಂದುತ್ವ. ನಮ್ಮ ಮೂರ್ಖ ಬುದ್ದಿಜೀವಿಗಳಿಗೆ ಇದೆಲ್ಲಾ ಅರ್ಥ ಅಗುತ್ತದೆ. ಬುದ್ದಿಜೀವಿಗಳು ಇದರ ಗೊಡವೆಗೆ ಹೋಗುವುದಿಲ್ಲ. ಅವರು ಯಾವತ್ತೂ ಪೂರ್ವಾಗ್ರಹ ಪೀಡಿತರಾಗಿ ತೆಗೆದುಕೊಳ್ಳುತ್ತಾರೆ. ಮನುಸ್ಮೃತಿಯಲ್ಲಿ ಮಹಿಳೆಯ ಬಗ್ಗೆ ಇರುವುದನ್ನು ಮಾತ್ರ ಅವರು ಗಮನಿಸುತ್ತಾರೆ. ಯಾರದೋ ನಾಲಿಗೆ ಹೊರಳಲಿಲ್ಲ ಅಂತಾ ನಾವು ಹಿಂದೂಗಳಾದೆವು ಎಂಬ‌ ಮೂರ್ಖತನದ ವಾದ ಮತ್ತೊಂದಿಲ್ಲ. ನನ್ನದು ಬದಲಾಗೋ ರಕ್ತ ಅಲ್ಲ, ಅಂತಹ ಅಮ್ಮನ ಹೊಟ್ಟೆಯಲ್ಲಿ ನಾನು ಹುಟ್ಟಿಲ್ಲ. ಯಾರದೋ ಕಮೆಂಟ್ ಗೆ ಹೆದರಿ‌ ಓಡುವವನು ಈ ಅನಂತಕುಮಾರ್ ಹೆಗಡೆ ಅಲ್ಲ. ನಾವು ವಿಷಕಂಠನ ರೀತಿ, ಅಮೃತ ಕುಡಿದರೆ ನಾವು ಸತ್ತು ಹೋಗುತ್ತೇವೆ ಎಂದಿದ್ದಾರೆ.

2 thoughts on “ನಂದು ಬದಲಾಗೋ ರಕ್ತ ಅಲ್ಲ, ಅಂತ ಅಮ್ಮನ ಹೊಟ್ಟೆಯಲ್ಲಿ ನಾನು ಹುಟ್ಟಿಲ್ಲ : ಅನಂತ್‌ ಕುಮಾರ್‌ ಹೆಗಡೆ

Leave a Reply

Your email address will not be published.

Social Media Auto Publish Powered By : XYZScripts.com