ಬಕ್ರೀದ್‌ಗೆ ದನ ಕಡೀತೀವಿ, ಯಾರು ವಿರೋಧಿಸಿದ್ರೂ ಸುಮ್ನಿರಲ್ಲ : ಪ್ರಚೋದನಕಾರಿ ಭಾಷಣ ಮಾಡಿದ ಮೌಲ್ವಿ

ವಿಜಯಪುರ : ರಂಜಾನ್‌ ಹಬ್ಬದ ಆಚರಣೆ ವೇಳೆ ಪ್ರಾರ್ಥನೆಯ ಬಳಿಕ ಮೌಲ್ವಿಯೊಬ್ಬರು ಪ್ರಚೋದನಕಾರಿ ಭಾಷಣ ಮಾಡಿದ ಸಂಗತಿ ಬೆಳಕಿಗೆ ಬಂದಿದೆ.

ಸಚಿವ ಶಿವಾನಂದ ಪಾಟೀಲ್ ರಂಜಾನ್‌ ಹಿನ್ನೆಲೆಯಲ್ಲಿ ಮುಸ್ಲೀಮರ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಅವರ ಎದುರೇ  ಮೌಲ್ವಿ ತನ್ವೀರ್ ಪೀರಾ  ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಒಂದು ತಿಂಗಳಲ್ಲಿ ಬಕ್ರೀದ್ ಬರಲಿದೆ.  ಆವಾಗ ನಾವು ಗೋವು ಕಡಿಯುತ್ತೇವೆ. ಸೈತಾನ್ (ಶಾಸಕ ಬಸನಗೌಡ ಯತ್ನಾಳ) ವಿರೋಧಿಸ್ತಾನೆ. ಆಗ ನಾವು ಸುಮ್ಮನಿರಲ್ಲ. ಗೋ ಹತ್ಯೆಯ ಜೊತೆಗೆ ಮತ್ತೊಂದು ಕುರಬಾನಿ ನಡೆಯೋದು ಗ್ಯಾರಂಟಿ ಎಂದಿದ್ದಾರೆ.

ಈ ವೇಳೆ ಅಲ್ಲೇ ಇದ್ದರೂ ಶಿವಾನಂದ ಪಾಟೀಲ್‌ ಯಾವುದೇ ರೀತಿ ಪ್ರತಿಕ್ರಿಯೆ ನೀಡದಿರುವುದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com