ಲೋಕಸಭಾ ಚುನಾವಣೆಗೆ ಪ್ರತಾಪ್ ಸಿಂಹ ಸಜ್ಜು : ಇಂದಿನಿಂದ ಪ್ರಚಾರ ಆರಂಭ

ಮೈಸೂರು : ಸುತ್ತೂರು‌ ಮಠಕ್ಕೆ‌ ಸಂಸದ‌ ಪ್ರತಾಪ್ ಸಿಂಹ ಭೇಟಿ ನೀಡಿದ್ದು, ಈ ವೇಳೆ ಕೇಂದ್ರ ಸರ್ಕಾರದ ನಾಲ್ಕು ವರ್ಷದ ಸಾಧನೆಯ ಪುಸ್ತಕವನ್ನು ಶ್ರೀಗಳು ಬಿಡುಗಡೆ ಮಾಡಿದ್ದಾರೆ.

ಇದೇ ವೇಳೆ ಮಾತನಾಡಿದ ಪ್ರತಾಪ್ ಸಿಂಹ ನಾಲ್ಕು ವರ್ಷದಲ್ಲಿ ಮೋದಿ ಮೈಸೂರಿಗೆ ಕೊಟ್ಟಿದ್ದೇನು?, ಪ್ರತಾಪ್‌ ಸಿಂಹ ತಂದಿದ್ದೇನು ಎಂಬುದನ್ನು ಪುಸ್ತಕದಲ್ಲಿ ವಿವರಿಸಿದ್ದೇನೆ.  ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ 48 ವರ್ಷಗಳ ಕಾಲ ದೇಶಕ್ಕೆ‌ ಕೊಟ್ಟಿದ್ದೇನು. ಮೋದಿ ಸರ್ಕಾರ 48 ತಿಂಗಳು ದೇಶಕ್ಕೆ ಕೊಟ್ಟಿರುವುದನ್ನ ಹೋಲಿಕೆ ಮಾಡಿ ತಿಳಿಸಿದ್ದೇವೆ. ಮೈಸೂರು ಅಭಿವೃದ್ಧಿಗೆ ಪ್ರತಾಪ್ ಸಿಂಹ ಏನು ಮಾಡಿದ್ದಾರೆ ಎಂಬುದನ್ನ ನಾಲ್ಕು ಪುಟದ ಕರಪತ್ರದಲ್ಲಿ ತಿಳಿಸಿದ್ದೇನೆ. ಲೋಕಸಭಾ ಚುನಾವಣೆಗೆ ಇಂದಿನಿಂದ ಪ್ರಚಾರವನ್ನ ಶುರು ಮಾಡುತ್ತಿದ್ದೇವೆ ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ.

ಲೋಕ‌ಸಭಾ ಚುನಾವಣೆಗೆ ಯಾವ ಪಕ್ಷ ವಿಲೀನವಾದರು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ನಾಲ್ಕು ವರ್ಷದಲ್ಲಿ ಮಾಡಿರುವ ಸಾಧನೆ ಮೇಲೆ ಚುನಾವಣೆಗೆ ಹೋಗುತ್ತೇವೆ. ಅದನ್ನ ಬಿಟ್ಟು ನಾನು ಬೇರೆ ಯಾವುದರ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.