ಅಫ್ಘನ್ ಕ್ರಿಕೆಟ್ ಅಭಿಮಾನಿಗಳ ಮನಗೆದ್ದ ಅಜಿಂಕ್ಯ ರಹಾನೆ : ಕಾರಣವೇನು..?

ಭಾರತ ಹಾಗೂ ಅಫಘಾನಿಸ್ತಾನ ತಂಡಗಳ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಎರಡನೇ ದಿನವೇ ಮುಕ್ತಾಯಗೊಂಡಿತು. ಈ ಪಂದ್ಯದಲ್ಲಿ ಅಫಘಾನಿಸ್ತಾನದ ವಿರುದ್ಧ ಭಾರತ ಇನ್ನಿಂಗ್ಸ್ ಹಾಗೂ 262 ರನ್ ಗಳಿಂದ ಭರ್ಜರಿ ಜಯ ಸಾಧಿಸಿತ್ತು.

Image result for afghanistan india test match fans chinnaswami bengaluru

ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜೇತ ತಂಡದ ನಾಯಕ ಅಜಿಂಕ್ಯ ರಹಾನೆಗೆ ಟ್ರೋಫಿ ನೀಡಲಾಯಿತು. ಈ ವೇಳೆ ಟೀಮ್ ಇಂಡಿಯಾ ಆಟಗಾರರೆಲ್ಲ ಟ್ರೋಫಿಯೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುವಾಗ ಅಜಿಂಕ್ಯ ರಹಾನೆ ಅಫ್ಘನ್ ಆಟಗಾರರನ್ನೂ ಆಹ್ವಾನಿಸಿದ್ದಾರೆ.

Image result for rahane afghanistan

ಪದಾರ್ಪಣೆ ಪಂದ್ಯದಲ್ಲಿ ಎದುರಾದ ಸೋಲಿನಿಂದ ನಿರಾಶರಾಗಿದ್ದ ಅಫಘಾನಿಸ್ತಾನ ಕ್ರಿಕೆಟ್ ಆಟಗಾರರನ್ನು ಅಜಿಂಕ್ಯ ರಹಾನೆ ಫೋಟೊ ಸೆಷನ್ ಗೆ ಆಹ್ವಾನಿಸುವ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com