FIFA 2018 : ರೊನಾಲ್ಡೊ ಹ್ಯಾಟ್ರಿಕ್ ಗೋಲ್ : ಪೋರ್ಚುಗಲ್-ಸ್ಪೇನ್ ಪಂದ್ಯ ಡ್ರಾ

ಶುಕ್ರವಾರ ಸೋಚಿಯಲ್ಲಿ ನಡೆದ ಫಿಫಾ ವಿಶ್ವಕಪ್ 2018 ಟೂರ್ನಿಯ ಪೋರ್ಚುಗಲ್ ಹಾಗೂ ಸ್ಪೇನ್ ತಂಡಗಳ ನಡುವಿನ ‘ಬಿ’ ಗುಂಪಿನ ಲೀಗ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

ಪೋರ್ಚುಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹ್ಯಾಟ್ರಿಕ್ ಗೋಲ್ ಬಾರಿಸಿ ಸಂಭ್ರಮಿಸಿದರು. ಪಂದ್ಯದ ಮೊದಲರ್ಧದ 4ನೇ ನಿಮಿಷದಲ್ಲಿಯೇ ಗೋಲ್ ಬಾರಿಸಿದ ರೊನಾಲ್ಡೊ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ 44ನೇ ಹಾಗೂ 88ನೇ ನಿಮಿಷಗಳಲ್ಲಿಯೂ ಗೋಲ್ ದಾಖಲಿಸಿ ಸೋಲಿನಿಂದ ಪಾರು ಮಾಡಿದರು.

ಸ್ಪೇನ್ ಪರವಾಗಿ ಡಿಯೆಗೋ ಕೋಸ್ಟಾ 24ನೇ ಮತ್ತು 55ನೇ ನಿಮಿಷದಲ್ಲಿ ಗೋಲ್ ಬಾರಿಸಿದರು. 58ನೇ ನಿಮಿಷದಲ್ಲಿ ಗೋಲ್ ಸಿಡಿಸಿದ ನ್ಯಾಚೊ ಸ್ಪೇನ್ ಗೆ ಮುನ್ನಡೆ ಒದಗಿಸಿದರು. ಆದರೆ 88ನೇ ನಿಮಿಷದಲ್ಲಿ ದೊರಕಿದ ಫ್ರೀ ಕಿಕ್ ಅನ್ನು ಬಳಸಿಕೊಂಡು ಚೆಂಡನ್ನು ಗೋಲ್ ಪೆಟ್ಟಿಗೆಗೆ ಸೇರಿಸಿದ ರೊನಾಲ್ಡೊ ಪಂದ್ಯ 3-3 ರಿಂದ ಡ್ರಾ ಆಗುವಂತೆ ಮಾಡಿದರು. ಎರಡೂ ತಂಗಳು ತಲಾ 1-1 ಪಾಯಿಂಟ್ ಗಳನ್ನು ಹಂಚಿಕೊಂಡಿವೆ.

Leave a Reply

Your email address will not be published.

Social Media Auto Publish Powered By : XYZScripts.com