FIFA 2018 : ಅರ್ಜೆಂಟೀನಾ ಎದುರಾಳಿ ಐಸ್‌ಲ್ಯಾಂಡ್ : ಮೆಸ್ಸಿ ಮ್ಯಾಜಿಕ್‍ಗಾಗಿ ಫ್ಯಾನ್ಸ್ ಕಾತರ

ಫಿಫಾ ವಿಶ್ವಕಪ್-2018 ಟೂರ್ನಿಯಲ್ಲಿ ಶನಿವಾರ ಮೂರು ಪಂದ್ಯಗಳ ನಡೆಯಲಿವೆ. ಜೂನ್ 14ರಂದು ಆರಂಭಗೊಂಡಿರುವ ಫುಟ್ಬಾಲ್ ಮಹಾಸಮರ ದಿನಕಳೆದಂತೆ ರಂಗೇರುತ್ತಿದೆ. ಮೊದಲ ಲೀಗ್ ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲ್ ಬಾರಿಸಿರುವ ರೊನಾಲ್ಡೊ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದ್ದಾರೆ.

ಶನಿವಾರ ಕಜಾನ್ ನಗರದ ಕಜಾನ್ ಅರೆನಾ ಮೈದಾನದಲ್ಲಿ ನಡೆಯಲಿರುವ ‘ಸಿ’ ಗುಂಪಿನ ಲೀಗ್ ಪಂದ್ಯದಲ್ಲಿ ಫ್ರಾನ್ಸ್ ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿವೆ.

‘ಡಿ’ ಗುಂಪಿನ ತಂಡಗಳಾದ ಅರ್ಜೆಂಟೀನಾ ಹಾಗೂ ಐಸ್ಲ್ಯಾಂಡ್ ನಡುವಿನ ಲೀಗ್ ಪಂದ್ಯ ಮಾಸ್ಕೋದ ಸ್ಪಾರ್ಟಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶ್ವ ವಿಖ್ಯಾತ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಮ್ಯಾಜಿಕ್ ಇಂದಿನ ಪಂದ್ಯದಲ್ಲಿಯೇ ನಡೆಯುವುದೇ ಎಂಬುದನ್ನು ಕಾದು ನೋಡಬೇಕಿದೆ.

ಸೆರಾನ್ಸ್ಕ್ ನಗರದ ಮರ್ಡೋವಿಯಾ ಅರೆನಾ ಮೈದಾನದಲ್ಲಿ ‘ಸಿ’ ಗುಂಪಿನ ತಂಡಗಳಾದ ಡೆನ್ಮಾರ್ಕ್ ಹಾಗೂ ಪೆರು ನಡುವೆ ಲೀಗ್ ಪಂದ್ಯ ನಡೆಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com