ವಿಎಚ್‌ಪಿ, ಭಜರಂಗದಳ ಧಾರ್ಮಿಕ ಉಗ್ರ ಸಂಘಟನೆಗಳು ಎಂದ ಅಮೆರಿಕ ಗುಪ್ತಚರ ಇಲಾಖೆ !!!

ದೆಹಲಿ : ಭಾರತದ ವಿಶ್ವಹಿಂದೂ ಪರಿಷತ್‌ (ವಿಎಚ್‌ಪಿ) ಹಾಗೂ ಭಜರಂಗದಳವನ್ನು ಧಾರ್ಮಿಕ ಉಗ್ರವಾದಿ ಸಂಘಟನೆಗಳು ಎಂದು ಅಮೆರಿಕದ ಗುಪ್ತಚರ ಇಲಾಖೆ ಸಿಐಎ ಹೇಳಿದೆ.

ಇತ್ತೀಚೆಗಷ್ಟೇ ಸಿಐಎ ವರ್ಲ್ಡ್‌ ಫ್ಯಾಕ್ಟ್‌ ಬುಕ್‌ ಸಂಚಿಕೆಯಲ್ಲಿ ಭಾರತದ ಈ ಎರಡೂ ಸಂಘಟನೆಗಳನ್ನು ಉಗ್ರಗಾಮಿ ಸಂಘಟನೆಗಳು ಎಂದಿದ್ದು, ಆರ್‌ಎಸ್‌ಎಸ್‌ ಸಂಘಟನೆಯನ್ನು ರಾಷ್ಟ್ರೀಯ ಸಂಸ್ಥೆ , ಹುರಿಯತ್‌ ಕಾನ್ಫರೆನ್ಸ್ ಸಂಘಟನೆಯನ್ನು ಪ್ರತ್ಯೇಕತಾವಾ ದಿ ಗುಂಪು ಎಂದೂ, ಜಮಾತ್ ಉಲೇಮಾ-ಇ-ಹಿಂದ್  ಸಂಘಟನೆಯನ್ನು ಧಾರ್ಮಿಕ ಸಂಸ್ಥೆ ಎಂದೂ ಪಟ್ಟಿಯಲ್ಲಿ ಹೆಸರಿಸಿದೆ.

ಈ ಗುಂಪುಗಳಲ್ಲಿರುವವರು ರಾಜಕೀಯದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡದಿದ್ದರೂ ರಾಜಕೀಯದಲ್ಲಿ ತೊಡಗಿಕೊಂಡಿರುವುದಾಗಿ ಹೇಳಿದೆ. ಅಮೆರಿಕ ಈ ಪುಸ್ತಕದಲ್ಲಿ ಅಮೆರಿಕದ ಸಮಸ್ಯೆ ಬಗ್ಗೆ ಮಾಹಿತಿ ನೀಡುವುದಲ್ಲದೆ, ಇತರೆ ದೇಶಗಳ ಆರ್ಥಿಕ ಸ್ಥಿತಿ, ಭೂಗೊಳ, ಸಾರಿಗೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾಹಿತಿ ಒದಗಿಸುತ್ತದೆ. ಅಲ್ಲದೆ ಈ ಪುಸ್ತಕ ಎಲ್ಲೆಡೆ ಸಾರ್ವಜನಿಕರಿಗೆ ಲಭ್ಯವಾಗುತ್ತದೆ.

ಇನ್ನು ಭಾರತದ ಹಿಂದೂ ಸಂಘಟನೆಗಳನ್ನು ಉಗ್ರ ಸಂಘಟನೆ ಎಂದಿರುವುದಕ್ಕೆ ಬಿಜೆಪಿ ಕಿಡಿ ಕಾರಿದ್ದು, ಅಮೆರಿಕದ ಸಂಸ್ಥೆ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಇದರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಸಂವಹನ ವಿಭಾಗದ ಮಾಜಿ ರಾಷ್ಟ್ರೀಯ ಸಂಚಾಲಕ ಖೇಮ್‌ಚಂದ್‌ ಶರ್ಮಾ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com