ರಾಜ್ಯದೆಲ್ಲೆಡೆ ರಂಜಾನ್ ಆಚರಣೆ : ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದ ಡಿಸಿಎಂ

ಬೆಂಗಳೂರು: ಇಂದು ನಾಡಿನಾದ್ಯಂತ ರಂಜಾನ್​ ಆಚರಣೆ ಮಾಡುತ್ತಿದ್ದು, ಮುಸ್ಲಿಂ ಬಾಂಧವರಿಗೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್​ ಶುಭಕೋರಿದ್ದಾರೆ.

ವಸಂತನಗರದ ಮಿಲ್ಲರ್ ರಸ್ತೆ​ ಹಾಗೂ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದೆ. ರಂಜಾನ್​ ಆಚರಣೆಯಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ್​ ಭಾಗಿಯಾಗಿದ್ದು, ಅವರಿಗೆ ಮೇಯರ್ ಸಂಪತ್ ರಾಜ್‌ ಸಾಥ್ ನೀಡಿದ್ದಾರೆ.

 

ಚಾಮರಾಜನಗರದಲ್ಲೂ ಸಹ ಮುಸ್ಲಿಂ ಭಾಂಧವರು ಪಟ್ಟಣದ ಈದ್ಗಾ ಮೈದಾನದಲ್ಲಿ ಜಮಾಯಿಸಿ ಸಾಮೂಹಿಕ ಪ್ರಾ ರ್ಥನೆ ಸಲ್ಲಿಸಿ ಪರಸ್ಪರ ಶುಭ ಕೋರಿಕೊಂಡರು.
ಹಸಿವು-ದಾಹ, ಲೈಂಗಿಕ ಆಸಕ್ತಿ, ನಿದ್ದೆ ಇವೆಲ್ಲವುಗಳ ಮೇಲಿನ ನಿಯಂತ್ರಣ ಉಪವಾಸದ ಉದ್ದೇಶ, ಸ್ವಚ್ಛ ನಾಲಗೆ ಮತ್ತು ಸ್ ಚ್ಛ ಮನಸ್ಸು ಉಪವಾಸದ ಗುರಿಯಾದರೆ. ವಿವೇಕ, ಸಹನೆ, ಉಪವಾಸದ ಪಾಠಗಳು. ದುರ್ಬಲರ ಮತ್ತು ಹಕ್ಕು ವಂಚಿತರ ದುಃಖ ಮತ್ತು ಬವಣೆಗಳನ್ನು ಅರಿಯುವ ಸಂದರ್ಭವೂ ಆಗಿರುವ ರಂಜಾನ್ ಆಚರಣೆಯನ್ನು ಮಾಡುವ ಮೂಲಕ ಒಂದು ತಿಂಗಳ ಉಪವಾಸ ಮಾಡಿ ಇಂದು ಅಂತ್ಯವಾಡದ್ದಾರೆ.

ದೇವನ ಅನುಗ್ರಹ ಪ್ರಪಂಚದ ಮಾನವರಾದ ನಮ್ಮೆಲ್ಲರ ಮೇಲಿರಲಿ ಎಂದು ಸಾರುವ ಮೂಲಕ ರಂಜಾನ್ ಆಚರಣೆ ಸಂಭ್ರಮ ಸಡಗರದಿಂದ ನಡೆಯಿತು. ಈ ಸಂದರ್ಭದಲ್ಲಿ ಸಂಸದ ಆರ್.ಧ್ರುವನಾ ರಾಯಣ್ ಪಾಲ್ಗೊಂಡು ಮುಸ್ಲಿಂ ಭಾಂದವರಿಗೆ ಶುಭ ಕೋರಿದ್ರು.

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ  ಪವಿತ್ರ ರಂಜಾನ್ ಹಬ್ಬ  ಕಳೆಗಟ್ಟಿದ ಸಂಭ್ರಮದಿಂದ ಕೂಡಿದ್ದು. ಕಿತ್ತೂರು ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ  ಸಾಮೂಹಿಕ ಪ್ರಾರ್ಥನೆ  ನಡೆಯುತ್ತಿದ್ದು, ಸಾವಿರಾರು ಮುಸ್ಲಿಂ ಬಾಂಧವರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಈ ಹಿನ್ನಲೆಯಲ್ಲಿ ಪೊಲೀಸ್‍ ಬಿಗಿ ಭದ್ರತೆ ಏರ್ಪಡಿಸಿದ್ದರು. ಪ್ರಾರ್ಥನೆ ನಡೆಯುವ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಬದಗಿಸುವಂತೆ ಹು-ಧಾ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಆದೇಶ ಹೊರಡಿಸಿದ್ದರು.

ಒಂದು ತಿಂಗಳ ಕಾಲ ಉಪವಾಸ ನಡೆಸಿದ ಮುಸ್ಲಿಮರು ರಂಜಾನ್​ ದಿನ ಕೊನೆಯ ದಿನವಾದ ಇಂದು ಶ್ರದ್ಧಾ ಭಕ್ತಿಯಿಂದ ರಾಜ್ಯದೆಲ್ಲೆಡೆ ರಂಜಾನ್ ಆಚರಣೆಯಲ್ಲಿ ತೊಡಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com