ತುಮಕೂರಿನಲ್ಲಿ ಕೋಳಿಫಾರ್ಮ್‌ಗೆ ನುಗ್ಗಿದ ಚಿರತೆ : 150ಕ್ಕೂ ಹೆಚ್ಚು ಕೋಳಿ ಬಲಿ

ರಾತ್ರಿ ಆಹಾರ ಅರಸಿ ಬಂದ ಚಿರತೆ ತುಂಬಾಡಿ ಗ್ರಾಮದ ರೈತ ಮಾರುತಿ ಎಂಬುವರಿಗೆ ಸೇರಿದ ಕೋಳಿಫಾರ್ಮ್‌ಗೆ ನುಗ್ಗಿ  ಅಲ್ಲಿದ್ದ ಅನೇಕ ಕೋಳಿಗಳನ್ನು ಚಿರತೆ  ಬಲಿ ತೆಗೆದುಕೊಂಡಿದೆ. ಮುಂಜಾನೆ ಕೋಳಿಗಳಿಗೆ ಮೇವು ಹಾಕಲು ಹೋದಾಗ ಕೋಳಿಫಾರ್ಮ್‌ ಒಳಗಡೆ ಚಿರತೆ ಕಂಡು, ಮಾರುತಿ ತಕ್ಷಣ ಹೊರಗೆ ಬಂದು ಬಾಗಿಲು ಹಾಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರು ತಿಂಗಳಿಂದ ತೋಟದ ಮನೆ ಸಮೀಪ ಫಾರ್ಮ್‌ ಮಾಡಿ ನಾಟಿಕೋಳಿ ಸಾಕಾಣಿಕೆಯಲ್ಲಿ ತೊಡಗಿದ್ದ ಇವರಿಗೆ ಇದರಿಂದ ಸಾಕಷ್ಟು ನಷ್ಟ ಉಂಟಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಹಿಡಿಯಲು ಅರವಳಿಕೆ ತಜ್ಞರ  ಬರುವಿಕೆಗಾಗಿ ಕಾಯುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ ಸತೀಶಚಂದ್ರ ಮತ್ತು ಪೊಲೀಸ್ ಇಲಾಖೆಯ ಮಂಜುನಾಥ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .

Leave a Reply

Your email address will not be published.

Social Media Auto Publish Powered By : XYZScripts.com