ವೀರಶೈವ / ಲಿಂಗಾಯಿತ ಧರ್ಮ ಸ್ವೀಕಾರ ಮಾಡಿದ ಜನಾರ್ಧನ ರೆಡ್ಡಿ ಕುಟುಂಬ….?

ಬೆಂಗಳೂರು : ಚುನಾವಣೆಯಲ್ಲಿ ಬಿಜೆಪಿ ದೂರವಿಟ್ಟಿದ್ದ ಗಣಿಧಣಿ ಜನಾರ್ಧನ ರೆಡ್ಡಿ ಕುಟುಂಬಸ್ಥರು ಇಷ್ಟಲಿಂಗ ದೀಕ್ಷೆ ಪಡೆದಿದ್ದಾರೆ. ಚುನಾವಣೆಯಲ್ಲಿ ತಾವು ಸ್ಪರ್ಧಿಸಲು ಸಾಧ್ಯವಾಗದಿದ್ದರೂ ತಮ್ಮ ಸ್ನೇಹಿತ ಶ್ರೀರಾಮುಲು ಪರ ಸಾಕಷ್ಟು ಪ್ರಚಾರ ಮಾಡಿದ್ದರು. ಭ್ರಷ್ಟರನ್ನು ಸಹಿಸುವುದಿಲ್ಲ ಎಂದಿದ್ದ ಬಿಜೆಪಿ ರಾಷ್ಟ್ರೀಯ  ನಾಯಕರು ಜನಾರ್ಧನ  ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ, ಯಾವವುದೇ ಕಾರಣಕ್ಕೂ ಬಿಜೆಪಿ ಪರ, ಶ್ರೀರಾಮುಲು ಪರ ಜನಾರ್ಧನ ರೆಡ್ಡಿ ಪ್ರಚಾರ ಮಾಡಕೂಡದು ಎಂದಿದ್ದರೂ ಸ್ನೇಹಿತನ ಪರ ರೆಡ್ಡಿ ಪ್ರಚಾರ ಮಾಡಿ ಸುದ್ದಿಯಾಗಿದ್ದರು.

ಇದಾದ ಬಳಿಕ ಯಾವುದೇ ಸುದ್ದಿಯಲ್ಲಿರದ ಜನಾರ್ಧನ ರೆಡ್ಡಿ ಈಗ ಮತ್ತೆ ಸುದ್ದಿಯಾಗಿದ್ದಾರೆ. ವಾರಣಾಸಿಯ ಜಂಗಮವಾಣಿ ಮಠದಲ್ಲಿ  ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಇಷ್ಟಲಿಂಗ ದೀಕ್ಷೆ  ನೀಡಿ ಆಶಿರ್ವದಿಸಿದ್ದಾರೆ.

ಜನಾರ್ಧನ ರೆಡ್ಡಿ ತಮ್ಮ ಧರ್ಮಪತ್ನಿ, ಪುತ್ರ ಹಾಗೂ ಅತ್ತೆ ಮಾವಂದಿರ ಸಮೇತವಾಗಿ ಕಾಶಿ ಪೀಠಕ್ಕೆ ತೆರಳಿ ಲಿಂಗದೀಕ್ಷೆ ಪಡೆದಿರುವುದಾಗಿ ತಿಳಿದುಬಂದಿದ್ದು, ಜನಾರ್ಧನ ರೆಡ್ಡಿ ಕುಟುಂಬ  ಲಿಂಗಾಯತ/ ವೀರಶೈವ ಧರ್ಮ ಸ್ವೀಕಾರ ಮಾಡಿದರಾ  ಎಂಬ ಪ್ರಶ್ನೆ ಉದ್ಭವವಾಗಿದೆ.

 

Leave a Reply

Your email address will not be published.