ಗೌರಿ ಹತ್ಯೆಯಲ್ಲಿ ಮೊದಲು ಪ್ರಮೋದ್ ಮುತಾಲಿಕ್ ಅವರನ್ನು ತನಿಖೆ ಮಾಡಿ : ಸಿ.ಎಂ ಇಬ್ರಾಹಿಂ

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರಮೋದ್ ಮುತಾಲಿಕ್  ಅವರನ್ನು ಮೊದಲು ತನಿಖೆ ಮಾಡಿ ಎಂದು ಕಾಂಗ್ರೆಸ್​ನ ವಿಧಾನ ಪರಿಷತ್​ ಸದಸ್ಯ​ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ರಂಜಾನ್​ ಪ್ರಾರ್ಥನೆ ವೇಳೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪರಶುರಾಮ್​ ವಾಗ್ಮೋರೆ ಬಂಧನ ವಿಚಾರದ ಕುರಿತು ಮಾತನಾಡಿ, ಬಂಧಿತ ಯುವಕ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದು, ಈತನ ಹಿಂದಿರುವ ವ್ಯಕ್ತಿಯನ್ನು ಪತ್ತೆ ಹಚ್ಚಬೇಕು. ಕಾಯಿಲೆಗೆ ಮದ್ದು ಕಂಡು ಹಿಡಿದರೆ ಸಾಲುವುದಿಲ್ಲ. ಅದಕ್ಕೆ ಕಾರಣವಾದದ್ದನ್ನು ಪತ್ತೆ ಮಾಡಬೇಕು ಎಂದಿದ್ದಾರೆ.

ಇಸ್ಲಾಂ ಧರ್ಮ ಪಾಪಿಯನ್ನು ಖಂಡಿಸುವುದಿಲ್ಲ. ಪಾಪವನ್ನು ಖಂಡಿಸುತ್ತದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ, ಜನರ ಜೀವನದಲ್ಲಿ ಹುಳಿ ಹಿಂಡಿರುವ ಪ್ರಮೋದ್ ಮುತಾಲಿಕ್ ಯಾವ ಮುಖ ಇಟ್ಟುಕೊಂಡು ದೇವರ ಬಳಿ ಹೋಗುತ್ತಾರೆ ಎಂದು ಕಿಡಿ ಕಾರಿದ್ದಾರೆ. ಅಲ್ಲದೆ ಅವರು ಇನ್ನಾದರೂ ಪಶ್ಚಾತಾಪ ಪಟ್ಟು ಸನ್ಮಾರ್ಗದಲ್ಲಿ ಬದುಕಲಿ ಎಂದಿದ್ದಾರೆ.

ನಿನ್ನೆಯಷ್ಟೇ ಗೌ ರಿ ಹತ್ಯೆ ಪ್ರಕರಣದ ಬಂಧಿತ ಆರೋಪಿ ವಾಗ್ಮೋರೆಗೂ ಶ್ರೀರಾಮ ಸೇನೆಗೂ ಸಂಬಂಧವಿಲ್ಲ ಎಂದು ಮುತಾಲಿಕ್ ಹೇಳಿದ್ದರು. ​

Leave a Reply

Your email address will not be published.

Social Media Auto Publish Powered By : XYZScripts.com