ಹಳೆ ವ್ಯವಸ್ಥೆ ಬದಲಿಸ್ತಾರಾ ಡಿಕೆಶಿ : ವೈದ್ಯರಿಗೆ ಖಡಕ್‌ ವಾರ್ನಿಂಗ್ ನೀಡಿದ ಟ್ರಬಲ್ ಶೂಟರ್

ಬೆಂಗಳೂರು : ಶುಕ್ರವಾರವಷ್ಟೇ ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ವೈದ್ಯರ ಕಾರ್ಯವಿಧಾನ ಹಾಗೂ  ಆಸ್ಪತ್ರೆಯನ್ನು ಪರಿಶೀಲಿಸಿದ್ದ  ಸಚಿವ ಡಿಕೆಶಿ ಇಂದು ಕಿಮ್ಸ್‌ ಆಸ್ಪತ್ರೆ ವೈದ್ಯರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಕಿಮ್ಸ್ ಆಸ್ಪತ್ರೆಯ ಒಪಿಡಿ ಬಂದ್ ಮಾಡಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಸಿಬ್ಬಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ರೋಗಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಕಿಮ್ಸ್ ಆಡಳಿತ ಮಂಡಳಿಗೆ ಸಚಿವರು ಆದೇಶಿಸಿದ್ದಾರೆ. ಸಚಿವರ ಆದೇಶದ ಹಿನ್ನೆಲೆಯಲ್ಲಿ  ಕಿರಿಯ ವೈದ್ಯರನ್ನು ಬಳಸಿಕೊಂಡು  ಕಿಮ್ಸ್ ಆಡಳಿತ ಮಂಡಳಿ ಒಪಿಡಿ ನಡೆಸುತ್ತಿದೆ.  ಈ ಹಿಂದೆಯೂ ಒಮ್ಮೆ 21 ದಿನ ವೈದ್ಯರು ಮುಷ್ಕರ ಹೂಡಿದ್ದಾಗ ಕಿರಿಯ ವೈದ್ಯರ ಸಹಾಯದಿಂದ ಆಸ್ಪತ್ರೆ ನಡೆಸಲಾಗಿತ್ತು.

ಈಗ ಪ್ರತಿಭಟನೆ ನಡೆಯುತ್ತಿದ್ದರೂ ಸಚಿವರ ಸೂಚನೆ ಮೇರೆಗೆ ರೋಗಿಗಳಿಗೆ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಲು ಕಿಮ್ಸ್ ಆಡಳಿತ ಮಂಡಳಿ ಸಜ್ಜಾಗಿದ್ದು, ಅಧಿಕಾರಕ್ಕೆ ಬಂದ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಶಿವಕುಮಾರ್  ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com