ಕುಮಾರಸ್ವಾಮಿ ಒಂದು ವರ್ಷ ಯಾಕೆ ಐದು ವರ್ಷನೂ ಸಿಎಂ ಆಗಿರಲಿ ಬಿಡಿ ಎಂದ ಯಡಿಯೂರಪ್ಪ !!

ಬೆಂಗಳೂರು : ಒಂದು ವರ್ಷ ಮೈತ್ರಿ ಸರ್ಕಾರವನ್ನು ಯಾರು ಅಲುಗಾಡಿಸಲು ಆಗಲ್ಲ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರ ಸಂಬಂಧ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಒಂದು ವರ್ಷ ಯಾಕೆ 5 ವರ್ಷವೂ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿರಲಿ ಎಂದಿದ್ದಾರೆ.

ಅವರದ್ದೇ ಮೈತ್ರಿ ಸರ್ಕಾರ ಇದೆಯಲ್ಲವಾ, ಒಂದು ವರ್ಷ ಯಾಕೆ 5 ವರ್ಷಾನೂ ಅವರೇ ಇರಲಿ ಎಂದು ಲೇವಡಿ ಮಾಡಿದ್ದಾರೆ. ಅಲ್ಲದೆ ವಿರೋಧ ಪಕ್ಷದಲ್ಲಿ ಇದ್ದುಕೊಂಡು ನಮ್ಮ ಕೆಲಸ ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದಿದ್ದಾರೆ.

ಗೌರಿ ಹತ್ಯೆ ಪ್ರಕರಣದಲ್ಲಿ ಹಿಂದೂಪರ ಸಂಘಟನೆಗಳ ಹೆಸರು ಕೇಳಿ ಬರುತ್ತಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಯಾರೇ ಅಪರಾಧಿಯಾಗಿರಲಿ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು..

Leave a Reply

Your email address will not be published.

Social Media Auto Publish Powered By : XYZScripts.com