ಕಾಂಗ್ರೆಸ್‌ ಅಧೀನದಲ್ಲಿ ಒದ್ದಾಡುತ್ತಿದೆ ಜೆಡಿಎಸ್‌ : ಸೂಪರ್ ಸಿಎಂ ಆಗ್ತಿದ್ದಾರಾ ಸಿದ್ದರಾಮಯ್ಯ?

ಬೆಂಗಳೂರು : ಹೊಸ ಬಜೆಟ್ ಮಂಡಿಸಬೇಕು ಎಂದು ಕಾಯುತ್ತಿದ್ದ ಸಿಎಂ ಕುಮಾರಸ್ವಾಮಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋತ ಬಳಿಕ ತಣ್ಣಗಾಗಿದ್ದ ಸಿದ್ದರಾಮಯ್ಯ ಈಗ ಜೆಡಿಎಸ್‌ ಮೇಲೆ ಹಕ್ಕು ಚಲಾಯಿಸುತ್ತಿದ್ದು, ಸೂಪರ್‌ ಸಿಎಂರಂತೆ ವರ್ತಿಸುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಸುದ್ದಿ ಕೇಳಿಬರುತ್ತಿದೆ.

ಜುಲೈ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಸಿಎಂ ಕುಮಾರಸ್ವಾಮಿ ಹೊಸ ಬಜೆಟ್ ಮಂಡಿಸುವ ಉತ್ಸಾಹದಲ್ಲಿದ್ದರು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅದಕ್ಕೆ ತಣ್ಣೀರೆರಚಿದ್ದು, ಹೊಸದಾಗಿ  ಬಜೆಟ್ ಮಂಡನೆ ಮಾಡುವ ಅಗತ್ಯವಿಲ್ಲ. ನಾನು ಈಗಾಗಲೆ ಬಜೆಟ್ ಮಂಡಿಸಿದ್ದೇನೆ. ಅದನ್ನೇ ಮುಂದುವರಿಸಿಕೊಂಡು ಹೋಗಲಿ. ಹೊಸ ಕಾರ್ಯಕ್ರಮಗಳಿದ್ದರೆ ಪೂರಕ ಬ ಜೆಟ್ ಮಂಡಿಸಲಿ ಎಂದಿದ್ದಾರೆ. ಅಲ್ಲದೆ ನಾನು ಆಗ್ರಹಿಸುತ್ತಿಲ್ಲ. ಇದು ನನ್ನ ಅಭಿಪ್ರಾಯವಷ್ಟೇ, ಮುಂದಿನದು ಕುಮಾರಸ್ವಾಮಿಯವರಿಗೆ ಬಿಟ್ಟ ವಿಚಾರ ಎಂದಿದ್ದಾರೆ.

ಆದರೆ ಸಿದ್ದರಾಮಯ್ಯನವರ ಈ ಹೇಳಿಕೆ ಕುಮಾರಸ್ವಾಮಿ ಗೆ ಇಕ್ಕಟ್ಟು ತಂದಿರುವುದಂತೂ ಸತ್ಯ. ಸಿದ್ದರಾಮಯ್ಯ ಹೇಳಿದಂತೆ ಕುಮಾರಸ್ವಾಮಿ ನಡೆದುಕೊಳ್ಳುತ್ತಾರಾ ಅಥವಾ ಹೊಸ ಬಜೆಟ್ ಮಂಡಿಸುತ್ತಾರಾ ಎಂದು ಕಾದು ನೋಡಬೇಕಿದೆ.

 

 

2 thoughts on “ಕಾಂಗ್ರೆಸ್‌ ಅಧೀನದಲ್ಲಿ ಒದ್ದಾಡುತ್ತಿದೆ ಜೆಡಿಎಸ್‌ : ಸೂಪರ್ ಸಿಎಂ ಆಗ್ತಿದ್ದಾರಾ ಸಿದ್ದರಾಮಯ್ಯ?

Leave a Reply

Your email address will not be published.

Social Media Auto Publish Powered By : XYZScripts.com