ಕಾಂಗ್ರೆಸ್‌ನಲ್ಲಿ ಒಮ್ಮೆ ನಿರ್ಧಾರ ತೆಗೆದುಕೊಂಡ್ರೆ ಮುಗೀತು ಮತ್ತೆ ಬದಲಾವಣೆ ಮಾಡಲ್ಲ : ಕೈ ನಾಯಕ

ಬೆಂಗಳೂರು : ನಾನು ಮೂರು ತಲೆಮಾರಿನ ಹೈಕಮಾಂಡ್ ನೋಡಿದ್ದೇನೆ. ಇಲ್ಲಿ ಒಮ್ಮೆ ತೆಗೆದುಕೊಂಡ ನಿರ್ಧಾರ ಬದಲಾಯಿಸಲು ಆಗಲ್ಲ. ಅದರ ವಿರುದ್ಧ ಹೋಗುವುದು ಒಳ್ಳೆಯದಲ್ಲ. ಯಾರು ಕೂಡ ಹೋಗಬಾರದು ಎಂದು ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಹೇಳಿ ದ್ದಾರೆ.

ರಂಜಾನ್ ಹಬ್ಬದ ಪ್ರಯುಕ್ತ  ಮುಸ್ಲಿಂ ಭಾಂಧವರ ಜೊತೆ ನಮಾಜ್  ಮಾಡಿದ ಬಳಿಕ ಮಾತನಾಡಿದ ಅವರು,  ಕಾಂಗ್ರೆಸ್ ನಲ್ಲಿ ಒಮ್ಮೆ ನಿರ್ಣಯ ತೆಗೆದುಕೊಂಡ ಮೇಲೆ ಬದಲಾವಣೆ ಅಗಲ್ಲ. ಭಿನ್ನಾಭಿಪ್ರಾಯಕ್ಕೆ ಇಲ್ಲಿ ಮಣೆ ಹಾಕಲ್ಲ. ನನ್ನ ಹಿರಿತನ,  ಸೇವೆ ಮತ್ತು ಬದ್ಧತೆ ಗುರುತಿಸಿ ಸಚಿವ ಸ್ಥಾನ ಕೊಡುವುದಾದ್ರೆ ಕೊಡಲಿ ಇಲ್ಲವಾದ್ರೆ ಪಕ್ಷ ಯಾವ ಜವಾಬ್ದಾರಿ ಕೊಟ್ಟರು ನಿಭಾಯಿಸುವೆ ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಶಾಸಕ ನಾಗೇಂದ್ರ, ಜಿಲ್ಲೆಯಲ್ಲಿ ಐವರು ಶಾಸಕರು ಸಚಿವಾಕಾಂಕ್ಷಿಗಳು ಇದ್ದೇವೆ.  ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದ್ದೇವೆ. ಸಮ್ಮಿಶ್ರ ಸರ್ಕಾರವಿರುವ ಕಾರಣ ಕೆಲ ಮಾನದಂಡಗಳಿವೆ. ಬಳ್ಳಾರಿಯಲ್ಲಿ ಎಲ್ಲ ಶಾಸಕರು ಸಚಿವ ಸ್ಥಾನ ನಿಭಾಯಿಸಲು ಶಕ್ತಿವಂತರಿದ್ದಾರೆ. ನಾವೆಲ್ಲರೂ ಒಟ್ಟಾಗಿದ್ದೇವೆ. ಯಾರಿಗೆ ಕೊಟ್ಟರೂ ಸಂತೋಷವೇ. ಯಾರಿಗೆ ಯಾವ ಸ್ಥಾನ ಕೊಟ್ಟರೆ ಪಕ್ಷಕ್ಕೆ ಒಳ್ಳೇಯದಾಗುತ್ತೆ ಅನ್ನೋದು ಪಕ್ಷಕ್ಕೆ ಬಿಟ್ಟ ವಿಚಾರ. ಅದರೆ ನಮ್ಮ ದೃಷ್ಠಿಕೋನ ಇರುವುದು ಮುಂದೆ ಇರುವ ಎಂ.ಪಿ. ಚುನಾವಣೆ ಮೇಲೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com