ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ : ಇನ್ನು 10 ದಿನದಲ್ಲಿ ಏನಾಗಲಿದೆ ಸಿಎಂ ಭವಿಷ್ಯ ?

ಅಹಮದಾಬಾದ್‌ : ಗುಜರಾತ್‌ನ ಮುಖ್ಯಮಂತ್ರಿ ವಿಜಯೇ ರೂಪಾನಿ ಇನ್ನು 10 ದಿನ ಮಾತ್ರ ಗುಜರಾತ್‌ನ ಮುಖ್ಯಮಂತ್ರಿಯಾಗಿರಲಿದ್ದು, ಬಳಿಕ ಅವರು ರಾಜೀನಾಮೆ ನೀಡಲಿದ್ದಾರೆ ಎಂದು ಪಾಟೀದಾರ್‌ ಸಮುದಾಯದ ಮುಖಂಡ ಹಾರ್ದಿಕ್‌ ಪಟೇಲ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಹಾರ್ದಿಕ್‌, ಮುಂದಿನ ಗುಜರಾತ್‌  ಮುಖ್ಯಮಂತ್ರಿ ಪಾಟೀಲ್‌ ಸಮುದಾಯದವರಾಗಲಿದ್ದಾರೆ. ಈ ಹಿಂದೆ ಆನಂದಿ ಬೆನ್ ಅವರಿಗೆ ಹೇಳಿದಂತೆ ಈಗಿನ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರಿಗೂ ರಾಜೀನಾಮೆ ಸಲ್ಲಿಸಲು ಹೇಳಿದ್ದೇವೆ. ಇನ್ನು 10 ದಿನದಲ್ಲಿ  ಅವರು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ಮುಂದಿನ 10 ದಿನಗಳಲ್ಲಿ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗುತ್ತದೆ. ಮುಂದಿನ ಮುಖ್ಯಮಂತ್ರಿ ಕ್ಷತ್ರಿಯ ಅಥವಾ ಪಾಟೀದಾರ್ ಸಮುದಾಯದವರು ಆಗಲಿದ್ದಾರೆ ಎಂದು ನಾನು ನಂಬಿದ್ದೇನೆ ಎಂದಿದ್ದು, ಗುಜರಾತ್‌ನಲ್ಲಿ ಏನು ನಡೆಯುತ್ತಿದೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯ್ ರೂಪಾನಿ,  ಕೆಲಸವಿಲ್ಲದೆ ಸುಮ್ಮನೆ ಕುಳಿತಿರುವ ಹಾರ್ದಿಕ್‌ ಪಟೇಲ್‌, ಮಾಧ್ಯಮಗಳ  ಗಮನವನ್ನು ತನ್ನತ್ತ ತಿರುಗಿಸಿಕೊಳ್ಳಲು ಸುಳ್ಳು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ನನಗೆ ಅಧಿಕಾರ ಕೊಟ್ಟಿರುವುದು ನನ್ನ ಜನ. ಹೇಳಿದ ಕೂಡಲೆ ನನ್ನ ಸ್ಥಾನದಿಂದ ಕೆಳಗಿಳಿಯಲು ಸಾಧ್ಯವಿಲ್ಲ. ಹಾರ್ದಿಕ್‌ ಕಾಂಗ್ರೆಸ್‌ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com