ಕಾಂಗ್ರೆಸ್‌ನವರ ಬೇಷರತ್‌ ಎಂದರೆ ಬೇ—ಷರತ್ತುಗಳ ಬೆಂಬಲ ಎಂದು ಅರ್ಥನಾ ? : ಸಿ.ಟಿ ರವಿ ವ್ಯಂಗ್ಯ

ತುಮಕೂರು : ರಾಜ್ಯ ಸಮ್ಮಿಶ್ರ ಸರ್ಕಾರದ ಬಗ್ಗೆ ಬಿಜೆಪಿ ನಾಯಕ ಸಿ.ಟಿ ರವಿ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್‌ನವರು ನಾವು ಜೆಡಿಎಸ್‌ಗೆ ಬೇಷರತ್  ಬೆಂಬಲ ನೀಡುವುದಾಗಿ ಹೇಳಿದ್ದರು. ಬೇಷರತ್ ಅಂದರೆ ಬೇ ಡ್ಯಾಷ್ ಷರತ್ತುಗಳ ಬೆಂಬಲ ಅಂತ ಬದಲಾಯಿಸಿದ್ದಾರಾ.?  ಎಂದು ಲೇವಡಿ ಮಾಡಿದ್ದಾರೆ.

ಸಾರ್ವಜನಿಕವಾಗಿ ಹೇಳಿದ ಮಾತು ಬೇಷರತ್ ಬೆಂಬಲ, ಆದರೆ ಮಾಡಿದ್ದು ಬೇರೆ. ಇದು ಹಳಸಿದವರು ಮತ್ತು ಹಸಿದವರ ಸರ್ಕಾರ.ಕಾಂಗ್ರೆಸ್ ನವರು ಹಳಸಿದವರು, ಜೆಡಿಎಸ್ ನವರು ಹಸಿದವರು. ಇವರಿಗೆ ಯಾವುದೇ ನೈತಿಕ, ಸೈದ್ದಾಂತಿಕ ಬಲವಿಲ್ಲ.ಖಾತೆಗಳ ಕ್ಯಾತೆ ನಿಂತಿಲ್ಲ, ಮಂತ್ರಿ ಮಂಡಲ ರಚನೆಯಾದ ದಿನದಿಂದ ಇವರ ರೋಧನೆ ಕಡಿಮೆಯಾಗಿಲ್ಲ. ಈ ಸರ್ಕಾರ ಎಷ್ಟು ದಿನ ಇರುತ್ತೆ ಅನ್ನೋ ಗ್ಯಾರೆಂಟಿಯನ್ನು ಮುಖ್ಯಮಂತ್ರಿ ಸಹೋದರನೇ ಕೊಡಲು ತಯಾರಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಷ್ಟು ದಿನ ಇರುತ್ತೋ ಸರ್ಕಾರ ಇರುತ್ತೋ ಎಂದು  ರೇವಣ್ಣನೇ ಹೇಳಿದ್ದಾರೆ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಅನ್ನುವ ನಿಟ್ಟಿನಲ್ಲಿ ಹಸಿದವರು ಊಟಕ್ಕಾಗಿ ಹಾತೊರೆಯುತ್ತಿದ್ದಾರೆ. ಈ ಸ್ಥಿತಿಯ ಸರ್ಕಾರ ರಾಜ್ಯದಲ್ಲಿದೆ. ಒಬ್ಬರು ಕಾಂಗ್ರೆಸ್ ಎಂಎಲ್ಎ ಹೇಳಿದರು ಸಿದ್ದರಾಮಣ್ಣ ಮನಸ್ಸು ಮಾಡಿದ್ರೆ ಎರಡೇ ದಿನಕ್ಕೆ ಈ ಸರ್ಕಾರ ನೆಗೆದು ಬಿದ್ದು ಹೋಗುತ್ತೆ ಅಂತ. ಹೊಟ್ಟೆ ಕಿಚ್ಚಿಗೆ ಮದ್ದಿಲ್ಲ ಅಂತ ನಾನು ಹೇಳಿಲ್ಲ, ಹೊಟ್ಟೆ ಒಳಗೆ ಇಷ್ಟೆಲ್ಲಾ ಕಿಚ್ಚು ಇಟ್ಟುಕೊಂಡಿರುವ ಕಾಂಗ್ರೆಸ್ ಶಾಸಕರಿದ್ದಾರೆ.  ನನಗೆ ಕೊಟ್ಟ ಖಾತೆ ಸರಿಯಿಲ್ಲ ಅಂತ ಮುನಿಸಿಕೊಳ್ಳುವ ಜೆಡಿಎಸ್ ಶಾಸಕರಿದ್ದಾರೆಹಾಗಾಗಿ ಹೆಚ್ಚು ದಿನ ಸರ್ಕಾರ ಇರುತ್ತೆ ಅಂತ ಯಾರಾದ್ರು ಹೇಳಿದರೆ ಅದು ಅವರಿಗೇ ನಂಬಿಕೆಯಿಲ್ಲದ ಮಾತಾಗುತ್ತೆ.  ಸರ್ಕಾರ ಎಷ್ಟು ದಿನ ಇರುತ್ತೆ ಅಂತ ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ ಎಂದು ಆರೋಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com