ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಭಾರತೀಯ ಯೋಧನ ಛಿದ್ರಗೊಂಡ ಶವ ಪತ್ತೆ…..

ಶ್ರೀನಗರ : ಜಮ್ಮುಕಾಶ್ಮೀರದಲ್ಲಿ ಉಗ್ರರ ಉಪಟಳವನ್ನು ನಿಯಂತ್ರಿಸಲು ಯೋಧರು ಹಗಲು ರಾತ್ರಿಯೆನ್ನದೆ ಶ್ರಮಿಸುತ್ತಿದ್ದರೆ, ಮತ್ತೊಂದೆಡೆ ಉಗ್ರರು ಯೋಧರೊಬ್ಬರನ್ನು ಅಪಹರಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಉಗ್ರರಿಂದ ಹತ್ಯೆಯಾಗಿರುವ ಯೋಧನನ್ನು ಔರಂಗಜೇಬ್ ಎಂದು ಹೆಸರಿಸಲಾಗಿದೆ. ಯೋಧನನ್ನು ಅಪಹರಿಸಿದ್ದ ಉಗ್ರರು ಇವರನ್ನು ಹತ್ಯೆ ಮಾಡಿದ್ದಾರೆ. ಪುಲ್ವಾಮಾದಲ್ಲಿ ಗುಂಡಿನಿಂದ ಛಿದ್ರಗೊಂಡ ಯೋಧರ ಮೃತದೇಹ ಪತ್ತೆಯಾಗಿದೆ.

ರಜೌರಿ ನಿವಾಸಿಯಾಗಿದ್ದ ಔರಂಗಜೇಬ್‌ ರಂಜಾನ್‌ ಹಬ್ಬಕ್ಕಾಗಿ ಮನೆಗೆ ಆಗಮಿಸಿದ್ದರು. ಈ ವೇಳೆ ಲಾಂಪೋರಾ ಪ್ರದೇಶದಲ್ಲಿ ಇವರನ್ನು ಅಪಹರಿಸಲಾಗಿತ್ತು. ಬಳಿಕ ಇವರಿಗಾಗಿ ಸಾಕಷ್ಟು ಹುಡುಕಾಟ ನಡೆಸಲಾಗಿತ್ತು. ಹಿಜ್ಬುಲ್‌ ಕಮಾಂಡರ್‌ ಸಮೀರ್‌ ಟೈಗರ್‌ ನನ್ನು ಹತ್ಯೆಗೈದ ಹಿರಿಯ ಸೇನಾಧಿಕಾರಿಯ ಪಡೆಯಲ್ಲಿ ಔರಂಗಜೇಬ್‌ ಕಾರ್ಯನಿರ್ವಹಿಸಿದ್ದರು. ಇದೇ ಕಾರಣಕ್ಕೆ ಔರಂಗಜೇಬ್‌ರನ್ನು ಅಪಹರಿಸಿ ಹತ್ಯೆಗೈಯಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಮಂಗಳವಾರ ಶಾಡಿಮಾರ್ಗ್‌ ಸೇನಾ ನೆಲೆಯ ಬಳಿ  ಔರಂಗಜೇಬ್‌ ಹೊರಟಿದ್ದರು. ಕೇವಲ ಎರಡು ಕಿ.ಮೀ ದೂರದಲ್ಲಿ ಶಸ್ತ್ರಧಾರಿ ಉಗ್ರರು ವಾಹನವನ್ನು ತಡೆದು, ಯೋಧನನ್ನು ಅಪಹರಿಸಿದ್ದಾರೆ. ಅಪಹರಣದ ಸುದ್ದಿ ತಿಳಿಯುತ್ತಿದ್ದಂತೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆದರೆ ಇಂದು ಛಿಧ್ರಗೊಂಡ ಸ್ಥಿತಿಯಲ್ಲಿ ಯೋಧನ ಮೃತದೇಹ ಪತ್ತೆಯಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com