FIFA 2018 : ಸ್ಪೇನ್ vs ಪೋರ್ಚುಗಲ್ : ರೋಚಕತೆ ಹೆಚ್ಚಿಸಿದ ಬಲಿಷ್ಠರ ಕಾಳಗ

ರಷ್ಯಾದ ಸೊಚಿ ನಗರದ ಫಿಸ್ಟ್ ಒಲಿಂಪಿಕ್ ಕ್ರೀಡಾಂಗಣದಲ್ಲಿ ಶುಕ್ರವಾರ ‘ಬಿ’ ಗುಂಪಿನ್ ಲೀಗ್ ಪಂದ್ಯ ನಡೆಯಲಿದ್ದು, ಬಲಿಷ್ಠ ತಂಡಗಳೆನಿಸಿಕೊಂಡ ಸ್ಪೇನ್ ಹಾಗೂ ಪೋರ್ಚುಗಲ್ ತಂಡಗಳು ಸೆಣಸಾಡಲಿವೆ.

ಸ್ಪೇನ್ ತಂಡದ ಸರ್ಜಿಯೊ ರಾಮೊಸ್ ಹಾಗೂ ಪೋರ್ಚುಗಲ್ ನ ಕ್ರಿಸ್ಟಿಯಾನೊ ರೊನಾಲ್ಡೊ ಶುಕ್ರವಾರದ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಕ್ಲಬ್ ಹಂತದ ಫುಟ್ಬಾಲ್ ನಲ್ಲಿ ರಾಮೊಸ್ ಹಾಗೂ ರೊನಾಲ್ಡೊ ರಿಯಲ್ ಮ್ಯಾಡ್ರಿಡ್ ಪರವಾಗಿ ಆಡುತ್ತಾರೆ.

ಫಿಫಾ ಇತಿಹಾಸದಲ್ಲಿ ಪೋರ್ಚುಗಲ್ ಒಮ್ಮೆಯೂ ವಿಶ್ವಕಪ್ ಗೆದ್ದಿಲ್ಲ. ರಷ್ಯಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಪೋರ್ಚುಗಲ್ ಪ್ರಥಮ ಬಾರಿಗೆ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸುವ ತವಕದಲ್ಲಿದೆ.

ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸಿಕೊಂಡಿದ್ದ 2010ರ ವಿಶ್ವಕಪ್ ನಲ್ಲಿ ಸ್ಪೇನ್ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಫೈನಲ್ ಪಂದ್ಯದಲ್ಲಿ ಹಾಲೆಂಡ್ ತಂಡವನ್ನು ಮಣಿಸಿದ್ದ ಸ್ಪೇನ್ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿತ್ತು. ಸ್ಪೇನ್ ಈ ಬಾರಿ ಎರಡನೇ ಸಲ ವಿಶ್ವಚಾಂಪಿಯನ್ ಆಗುವ ಕನಸನ್ನು ಕಾಣುತ್ತಿದೆ.

ಶುಕ್ರವಾರವೇ ‘ಎ’ ಗುಂಪಿನ ತಂಡಗಳಾದ ಈಜಿಪ್ಟ್ ಹಾಗೂ ಉರುಗ್ವೆ ತಂಡಗಳ ನಡುವೆ ಪಂದ್ಯ ಎಕಟೆರೆನಿಬರ್ಗ್ ನಲ್ಲಿ ನಡೆಯಲಿದೆ. ‘ಬಿ’ ಗುಂಪಿನ ಮೊರಾಕ್ಕೊ ಹಾಗೂ ಇರಾನ್ ತಂಡಗಳ ನಡುವೆ ಲೀಗ್ ಪಂದ್ಯ ನಡೆಯಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com