ಪ್ರತ್ಯೇಕ ಧರ್ಮದ ಶಿಫಾರಸ್ಸು ವಾಪಸ್ ಕಳಿಸಿದರೆ ಉಗ್ರ ಹೋರಾಟ : ಸಿದ್ಧರಾಮ ಸ್ವಾಮೀಜಿ ಎಚ್ಚರಿಕೆ

ಬೆಳಗಾವಿ : ಬೆಳಗಾವಿಯಲ್ಲಿ ನಾಗನೂರು ರುದ್ರಾಕ್ಷಿ ಮಠದ ಸಿದ್ದರಾಮ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ‘ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಹಿಂದುತ್ವ, ಹಿಂದುತ್ವ ಪ್ರತಿಪಾದಕ ಪಕ್ಷದಿಂದ ವಿರೋಧ ವ್ಯಕ್ತವಾಗುತ್ತಿದೆ. ಜೈನ್, ಸಿಖ್, ಬೌದ್ಧ ಧರ್ಮಿಯರು ಸ್ವತಂತ್ರ್ಯವಾಗಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯ ಕಳುಹಿಸಿರುವ ಶಿಫಾರಸ್ಸನ್ನು ಮಾನ್ಯತೆ ಮಾಡಬೇಕು. ಪ್ರಧಾನಿ ಮೋದಿ ಸಚಿವ ಸಂಪುಟದಲ್ಲಿ ಚರ್ಚಿಸಿ ಮಾನ್ಯತೆ ನೀಡಬೇಕು ‘ ಎಂದಿದ್ದಾರೆ.

ಕೇಂದ್ರ ಸರ್ಕಾರ ವರದಿ ವಾಪಸ್ ಎಂದು ಕೆಲವರಿಂದ ವದಂತಿ ಇದನ್ನು ಕೇಳಿ ಪಂಚ ಪೀಠಾಧೀಶರು, ಲಿಂಗಾಯತ ಪ್ರತ್ಯೆಕ ಧರ್ಮ ವಿರೋಧಿಗಳು ಸಂಭ್ರಮಹಿಸುತ್ತಿದ್ದಾರೆ. ಲಿಂಗಾಯತ ಚಳುವಳಿ ಡ್ಯಾಮೆಜ್ ಮಾಡಲು ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಕೇಂದ್ರ ಸರ್ಕಾರ ಶಿಫಾರಸ್ಸು ವಾಪಸ್ ಕಳುಹಿಸಿದರೆ ಉಗ್ರ ಹೋರಾಟ ಮಾಡಲಾಗುವುದು.

ಕೇಂದ್ರ ಸರ್ಕಾರ ಪ್ರತ್ಯೇಖ ಧರ್ಮ ವಿರೋಧಿಸಿದರೆ ಲಿಂಗಾಯತರು ಅವರನ್ನು ವಿರೋಧಿಸುತ್ತಾರೆ. ಕಾಂಗ್ರೆಸ್ 79 ಸ್ಥಾನ ಪಡೆಯಲು ಲಿಂಗಾಯತ ಹೋರಾಟದ ಪ್ರತಿಫಲ ಕಾರಣವಾಗಿದೆ. ಲಿಂಗಾಯತ ಹೋರಾಟದಲ್ಲಿ ಪಾಲ್ಗೊಂಡ ಕೆಲವರು ಸೋತ್ತಿದ್ದಾರೆ
ವೈಯಕ್ತಿಕ ಕಾರಣದಿಂದ ಅವರು ಸೋತಿದ್ದಾರೆ.

‘ ರಾಜ್ಯ ಸರ್ಕಾರ ಲಿಂಗಾಯತರನ್ನು ಮತ್ತು ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯಿಸಬಾರದು. ಎಂ. ಬಿ. ಪಾಟೀಲ್, ಬಸವರಾಜ್ ಹೊಟ್ಟಿಗೆ ಸಚಿವ ಸ್ಥಾನ ಕೈತಪ್ಪಲು ಲಿಂಗಾಯತ ಹೋರಾಟದಲ್ಲಿ ಪಾಲ್ಗೊಂಡದ್ದು ಕಾರಣವಾಗಿದೆ. ಲಿಂಗಾಯತ, ವೀರಶೈವರು ಒಂದಾಗೋದು ಸಾಧ್ಯವಿಲ್ಲ. ನಾವು ವೀರಶೈವರ ಜತೆಗೆ ಲಿಂಗಾಯತರು ಸೇರಲ್ಲ ‘ ಎಂದು ಬೆಳಗಾವಿಯಲ್ಲಿ ಡಾ.ಸಿದ್ದರಾಮ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com