ಮಂಡ್ಯ : ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ : 3 ಬಾಂಗ್ಲಾ ಯುವತಿಯರ ರಕ್ಷಣೆ

ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿರುವ ಪೊಲೀಸರು ಮೂವರು ಬಾಂಗ್ಲಾ ಯುವತಿಯರ ರಕ್ಷಣೆ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಪ್ರಕೃತಿ ಲಾಡ್ಜ್ ನಲ್ಲಿ ಘಟನೆ ನಡೆದಿದೆ. ಮೈಸೂರು-ಬೆಂಗಳೂರು ಹೆದ್ದಾರಿ ಬದಿ ಇರುವ ಲಾಡ್ಜ್ ನಲ್ಲಿ ಗುಹೆ ರೀತಿ ಕೊಠಡಿ ನಿರ್ಮಿಸಿ ಹುಡುಗಿಯರನ್ನು ಅಡಗಿಸಿಟ್ಟಿದ್ದರು.

ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ನೀಡಿದ ಮಾಹಿತಿ ಮೇರೆಗೆ ಪೊಲೀಸರ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸತತ 5 ಗಂಟೆಗಳ ಪರಿಶೀಲನೆ ನಂತರ ಗುಹೆ ರೀತಿ ಕೊಠಡಿ ಪತ್ತೆಯಾಗಿದೆ. ಪೊಲೀಸ್ ದಾಳಿ ನಡೆಯುತ್ತಿದ್ದಂತೆ ವಸತಿ ಗೃಹ ಮಾಲೀಕ‌ ನಾಪತ್ತೆಯಾಗಿದ್ದಾನೆ.

ವಸತಿ ಗೃಹದ ಸಿಬ್ಬಂದಿಯನ್ನು ವಶಕ್ಕೆ ಪಡೆದ ಪೋಲೀಸರು ವಿಚಾರಣೆ ನಡೆಸಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ..

Leave a Reply

Your email address will not be published.

Social Media Auto Publish Powered By : XYZScripts.com