ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮೇಲಿಂದ ಬಿದ್ದು ವಿದೇಶಿ ಪ್ರಜೆ ಸಾವು

ಮೈಸೂರು : ನಿರ್ಮಾಣ ಹಂತದಲ್ಲಿದ್ದ  ಕಾರ್ಖಾನೆಯನ್ನು ಪರಿಶೀಲಿಸಲು ಬಂದಿದ್ದ ವಿದೇಶಿ ಪ್ರಜೆ ಕಟ್ಟಡದಿಂದ ಬಿದ್ದು ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಏಷ್ಯಾನ್ ಪೇಂಟ್ಸ್ ಕಟ್ಟಡವನ್ನು ಪರಿಶೀಲಿಸುತ್ತಿದ್ದರು ಈ ವೇಳೆ ಕಾಲು ಜಾರಿ ಕಟ್ಟಡದಿಂದ ಬಿದ್ದು ವಿದೇಶಿ ಪ್ರಜೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

58ವರ್ಷದ ಮೇರಿಯನ್ಟೋನಿಯ ಮೃತ ವಿದೇಶಿ ಪ್ರಜೆ. ಮೂಲತಃ ಇಟಲಿಯವರಾದ ಮೇರಿಯನ್ಟೋನಿಯ ಕಾರ್ಖಾನೆ ಪರಿಶೀಲನೆಗೆ ಆಗಮಿಸಿದ್ದ ವೇಳೆ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದರು. ತಕ್ಷಣ ಚಿಕಿತ್ಸೆಗಾಗಿ ಗಾಯಾಳು ಮೇರಿಯನ್ಟೋನಿಯ ಅವರನ್ನ ಜೆಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಮೇರಿಯನ್ಟೋನಿಯ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟರು.

ಸದ್ಯ ಮೇರಿಯನ್ಟೋನಿಯ ಮೃತದೇಹ ಜೆಎಸ್ ಎಸ್ ಶವಗಾರದಲ್ಲಿದೆ . ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಇಟಲಿ ರಾಯಭಾರಿ ಕಚೇರಿ ಅಧಿಕಾರಿಗಳ, ಏಷ್ಯಾನ್ ಪೇಂಟ್ ಕಂಪನಿಯರ ದೂರಿನ ಬಳಿಕ ಮುಂದಿನ ಕ್ರಮಕೈಗೊಳ್ಳಲಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೇರಿಯನ್ಟೋನಿಯ ಮೃತ ದೇಹ ಇಟಲಿಗೆ ರವಾನೆಯಾಗಲಿದೆ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published.