ಕಾಂಗ್ರೆಸ್‌ಗೆ ಕೈ ಕೊಟ್ಟು ತೆನೆ ಹೊರಲು ಸಿದ್ಧರಾದರಾ ಮಂಡ್ಯದ ಗಂಡು ಅಂಬರೀಶ್‌….?

ಮಂಡ್ಯ : ಕಾಂಗ್ರೆಸ್‌ ಪಕ್ಷದ ಮೇಲೆ ಅಸಮಾಧಾನಗೊಂಡು ಟಿಕೆಟ್ ನೀಡಿದರೂ ಚುನಾವಣೆಗೆ ಸ್ಪರ್ದಿಸದ  ರೆಬೆಲ್‌ ಸ್ಟಾರ್ ಅಂಬರೀಶ್ ಈಗ ಜೆಡಿಎಸ್‌ಗೆ ಸೇರ್ಪಡೆಯಾದರಾ ಎಂಬ ಅನುಮಾನ ಕಾಡುತ್ತಿದೆ.

ಸಚಿವರಾದ ನಂತರ ಇದೇ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ಮಂಡ್ಯದ ಮದ್ದೂರಿಗೆ ಆಗಮಿಸುತ್ತಿರುವ ಸಚಿವ ಡಿ.ಸಿ ತಮ್ಮಣ್ಣ ಅವರನ್ನು ಸ್ವಾಗತಿಸಲು ಹಾಕಿರುವ ಫ್ಲೆಕ್ಸ್ ಗಳಲ್ಲಿ ಅಂಬರೀಶ್ ಅವರ ಫೋಟೋವನ್ನು ಹಾಕಲಾಗಿದ್ದು, ಅಂಬರೀಶ್‌ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರಾ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಡಿ.ಸಿ ತಮ್ಮಣ್ಣ ಅವರಿಗೆ ಸ್ವಾಗತ ಕೋರಲು ಬೆಂಬಲಿಗರು ದಾರಿಯುದ್ದಕ್ಕೂ ಫ್ಲೆಕ್ಸ್ ಹಾಕಿದ್ದು, ಸ್ವಾಗತ ಕೋರಿ ಹಾಕಿರುವ ಫ್ಲೆಕ್ಸ್ ಗಳಲ್ಲಿ ಜೆಡಿಎಸ್ ಮುಖಂಡರ ಭಾವಚಿತ್ರದ ಜೊತೆಗೆ ಅಂಬರೀಶ್ ಭಾವಚಿತ್ರವನ್ನೂ ಹಾಕಲಾಗಿದೆ.

ಇತ್ತೀಚೆಗಷ್ಟೇ ತಮ್ಮಣ್ಣ ಅವರ ಪರ ಅಂಬರೀಶ್‌ ಲಾಬಿ ನಡೆಸಿದ್ದು, ಮಂಡ್ಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲು ಹರಸಾಹಸ ಪಟ್ಟಿದ್ದರು. ಅಲ್ಲದೆ ಚುನಾವಣೆ ವೇಳೆ ಅಂಬರೀಶ್‌, ಕುಮಾರಸ್ವಾಮಿ ಹಾಗೂ ದೇವೇಗೌಡಜರ ಪರ ಮಾತನಾಡಿದ್ದರು. ಈಗ ಫ್ಲೆಕ್ಸ್‌ನಲ್ಲಿ ಜೆಡಿಎಸ್ ಮುಖಂಡರ ಜೊತೆ ಅಂಬರೀಶ್ ಗುರುತಿಸಿಕೊಳ್ಳುತ್ತಿದ್ದು, ಜೆಡಿಎಸ್‌ ಸೇರ್ಪಡೆಯಾಗುತ್ತಾರಾ ಎಂಬ ಅನುಮಾನ ಕಾಡುತ್ತಿದೆ.

Leave a Reply

Your email address will not be published.