ಹಾವೇರಿ : ಪ್ರೀತಿಸಿ ಕೈಕೊಟ್ಟ ಪ್ರೇಮಿ : ನ್ಯಾಯಕ್ಕಾಗಿ ಪೋಲೀಸರ ಮೊರೆ ಹೋದ ಯುವತಿ..

ಹಾವೇರಿ : ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿದ ಯುವಕನೊಬ್ಬ ಯುವತಿಗೆ ಮೋಸ ಮಾಡಿರುವ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ನಡೆದಿದೆ. 30 ವರ್ಷ ವಯಸ್ಸಿನ ಮಂಜೂರ್ ಇಲಾಹಿ ಮೋಸ ಮಾಡಿದ್ದಾನೆ.

ಮೊಬೈಲ್ ರೀಪೇರಿ ಅಂಗಡಿ ಮಾಲೀಕನಾಗಿದ್ದ ಮಂಜುರ ಇಲಾಹಿ ಅದೇ ಗ್ರಾಮದ ಶಬಾಸ ಮುಲ್ಲಾ ಅನ್ನೋ ಯುವತಿ ಮೊಬೈಲ್ ರಿಪೇರಿ ನೀಡಲು ಹೋದಾಗ ಯುವತಿ ಪರಿಚಯವಾಗಿದೆ. ನಂತರ ಯವತಿಗೆ ವಾಟ್ಸ ಅಪ್ ಮೂಲಕ ಸಂದೇಶ ಕಳುಹಿಸುತ್ತಿದ್ದ, ಪ್ರೀತಿ ಮಾಡುವುದಾಗಿ ಹೇಳಿ ನಂಬಿಸಿದ್ದ.

ಮನೆಗೆ ಕರೆದುಕೊಂಡು ಹೋಗಿ ‌ಯುವತಿ ಜೋತೆ ದೈಹಿಕ ಸಂಪರ್ಕ ಬೆಳೆಸಿದ್ದ. ಮಂಜುರ ಇಲಾಹಿ ದೈಹಿಕ ಸಂಪರ್ಕದ ವೀಡಿಯೋ ಚಿತ್ರೀಕರಿಸಿ ಯುವತಿಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ಹಲವು ಹೋಟಲ್ ರೂಮ್ ಗಳಿಗೆ ಕರೆದುಕೊಂಡು ಹೋಗಿ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಯುವತಿಗೆ ಮದುವೆ ಆಗುವುದಾಗಿ ನಂಬಸಿ ಮಂಜುರ ಇಲಾಹಿ ಪರಾರಿಯಾಗಿದ್ದಾನೆ. ಸಂತ್ರಸ್ಥೆ ಯುವತಿ ನ್ಯಾಯಕ್ಕಾಗಿ ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಹಾನಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.