ಧೂಳಿನ ಮಾರುತಕ್ಕೆ ಮತ್ತೆ 15ಮಂದಿ ಬಲಿ : 200ಕ್ಕೆ ಏರಿದ ಸಾವಿನ ಸಂಖ್ಯೆ

ಲಖನೌ: ಉತ್ತರ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಉಂಟಾದ ಧೂಳು ಸಹಿತ ಉಂಟಾದ ಬಿರುಗಾಳಿ ಹೊಡೆತಕ್ಕೆ ಮತ್ತೆ 15ಮಂದಿ ಮೃತಪಟ್ಟಿದ್ದು, 32ಮಂದಿ ಗಾಯಗೊಂಡಿದ್ದಾರೆ. ಮೇ ನಿಂದಲೂ ಪದೇ ಪದೇ ಧೂಳಿನ ಬಿರುಗಾಳಿ ಉಂಟಾಗುತ್ತಿದ್ದು, ಬಲಿಯಾದವರ ಸಂಖ್ಯೆ 200ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೀತಾಪುರದಲ್ಲಿ 6ಮಂದಿ ಮೃತಪಟ್ಟಿದ್ದು, 21 ಜನ ಅಸ್ವಸ್ಥರಾಗಿದ್ದಾರೆ. ಗೊಂಡಾ ಹಾಗೂ ಕೌಶಂಬಿಗಳಲ್ಲಿ ತಲಾ ಮೂರು ಮಂದಿ ಮೃತಪಟ್ಟಿದ್ದಾರೆ. ಫೈಜಾಬಾದ್, ಚಿತ್ರಕೂಟ್ ಮತ್ತು ಹಾರ್ಡೋಯಿಯಲ್ಲಿ ತಲಾ ಒಬ್ಬರು ಧೂಳಿಗೆ ಬಲಿಯಾಗಿದ್ದಾರೆ. ಫೈಜಾಬಾದ್​ನಲ್ಲಿ 11ಮಂದಿ ಗಾಯಗೊಂಡಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.


ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ. ಹಾಗೂ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆಯಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಈ ವರ್ಷದ ಮೇ ನಿಂದ ಏಳು ಬಿರುಗಾಳಿಗಳು ಸಂಭವಿಸಿದ್ದು, ಅಪಾರ ಪ್ರಾಣಹಾನಿ ಹಾಗೂ ಆಸ್ತಿಪಾಸ್ತಿ ನಷ್ಟವಾಗಿದೆ.

 

Leave a Reply

Your email address will not be published.