ಅಪೌಷ್ಟಿಕ ಮಕ್ಕಳ ಭಿಕ್ಷಾಟನೆ ಪ್ರಕರಣಕ್ಕೆ ಹೊಸಟ್ವಿಸ್ಟ್:ಮಕ್ಕಳ ಕಿರುನಾಲಿಗೆ ಕತ್ತರಿಸಿ ಹಣ ಸಂಪಾದನೆ

ಕಲಬುರಗಿ: ಅಪೌಷ್ಟಿಕ ಮಕ್ಕಳನ್ನು ಭಿಕ್ಷಾಟನೆಗೆ ತಳ್ಳಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಕಿರಾತಕರು ಮಕ್ಕಳನ್ನು ಭಿಕ್ಷಾಟನೆಗೆ ಕಳಸಿದಲ್ಲದೇ, ಪುಟ್ಟ ಮಕ್ಕಳ ಕಿರುನಾಲಿಗೆಯನ್ನು ಕತ್ತರಿಸಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ರಂಜಾನ್ ಮಾಸಾಚರಣೆ ಸಂದರ್ಭದಲ್ಲಿ ಅಪೌಷ್ಠಿಕ ಮಕ್ಕಳನ್ನು ಭಿಕ್ಷಾಟನೆಗೆ ಬಳಸಿ ಹಣ ಗಳಿಸುತ್ತಿದ್ದ ಪ್ರಕರಣ ಕಲಬುರ್ಗಿಯಲ್ಲಿ ಬೆಳಕಿಗೆ ಬಂದಿತ್ತು. ಈ ಸಂಬಂಧ ಪೊಲೀಸರು ಉತ್ತರ ಪ್ರದೇಶ ಮೂಲದ ಮೂವರು  ಓರ್ವ ಆರೋಪಿಗಳನ್ನು ಬಂಧಿಸಿದ್ದರು. ಭಿಕ್ಷಾಟನೆಗೆ ಬಳಕೆಯಾಗುತ್ತಿದ್ದ ಇಬ್ಬರು ಅಪೌಷ್ಠಿಕ ಮಕ್ಕಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.  ಮಕ್ಕಳನ್ನು ಪರೀಕ್ಷೆ ಮಾಡುವ ವೇಳೆ ಮಕ್ಕಳ ಕಿರು ನಾಲಿಗೆ ಇಲ್ಲದೆ ಇರುವ ಅಂಶವನ್ನು ವೈದ್ಯರು ತಿಳಿಸಿದ್ದಾರೆ. ಮಕ್ಕಳು ಮಾತನಾಡುವ ಸಾಮರ್ಥ್ಯ ಕಳೆದುಕೊಳ್ಳುವ ಉದ್ದೇಶದಿಂದ ಕಿರಾತಕರು ಮಕ್ಕಳ ಕಿರುನಾಲಿಗೆಯನ್ನೆ ಕತ್ತರಿಸಿದ್ದಾರೆ ಎಂಬ ಅನುಮಾನ ಮೂಡಿದೆ.

ಮಕ್ಕಳನ್ನು ಭಿಕ್ಷಾಟನೆಗೆ ತಳ್ಳಿದ ನಂತರ, ಅವರು ಸರಿಯಾಗಿ ಮಾತನಾಡಬಾರದು ಎಂಬ ಉದ್ದೇಶದಿಂದ ಹತ್ತುವರ್ಷದೊಳಗಿನ ಇಬ್ಬರು ಮಕ್ಕಳಿಗೆ ಈ ರೀತಿ ಮಾಡಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ವಿ.ರಾಮನ್ ಮಾಹಿತಿ ನೀಡಿದ್ದಾರೆ. ಒಂದು ವಾರದ ಹಿಂದೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಜಂಟಿ ಕಾರ್ಯಾಚರಣೆ ನಡೆಸಿ, ಬಿಕ್ಷಾಟನೆಗೆ ತೊಡಗಿಸಿರುವ ಮಕ್ಕಳನ್ನು ರಕ್ಷಣೆ ಮಾಡಲಾಗಿತ್ತು. ಭಿಕ್ಷಾಟನೆಗೆ ಬಳಸುವ ಮಕ್ಕಳು ಅಪೌಷ್ಠಿಕವಾಗಿರುವುದೇ ಅಲ್ಲದೆ, ಅವರ ಅಂಗಾಗಳಿಗೂ ಹಾನಿಯುಂಟು ಮಾಡಿ, ಅದನ್ನೇ ಬಂಡವಾಳ ಮಾಡಿಕೊಂಡು ಭಿಕ್ಷಾಟನೆ ಮಾಡಿಸುತ್ತಿದ್ದರು ಎಂದು ತನಿಖೆಯ ವೇಳೆ ಬಹಿರಂಗಗೊಂಡಿದೆ.

Leave a Reply

Your email address will not be published.