ನಾವು ಸರ್ಕಾರ ಬೀಳಿಸಲ್ಲ, ಅವರವರೇ ಕಾದಾಡಿಕೊಂಡು ಸರ್ಕಾರ ಬಿದ್ದೋಗುತ್ತೆ : ಶೆಟ್ಟರ್‌

ಹುಬ್ಬಳ್ಳಿ : ಸಾಲ ಮನ್ನಾ ಬಗ್ಗೆ ಮಾಡುವುದಾಗಿ ಹೇಳಿದ್ದ ಸಿಎಂ ಹೆಚ್ ಡಿಕೆ ಈಗ ಹಿಂದೇಟು ಹಾಕುತ್ತಿದ್ದಾರೆ.  ಸಾಲ ಮನ್ನಾ ಕುರಿತಂತೆ ವಿಶೇಷ ಆದ್ಯತೆ ಮೇಲೆ ಚರ್ಚೆ ಮಾಡಬೇಕಿತ್ತು. ರೈತರ ಸಾಲ ಮನ್ನಾ ಮಾಡಲು ಸಿದ್ದರಾಮಯ್ಯ, ಹೆಚ್ ಡಿಕೆಗೆ ಮನಸ್ಸಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರೈತರ 50 ಸಾವಿರ ಕೋಟಿ ಸಾಲ ಮನ್ನಾ ಮಾಡೋಕೆ ಇವರಿಂದ ಸಾಧ್ಯವಿಲ್ಲ. ಹೆಚ್ ಡಿಕೆ ಈಗ ಸಾಲ ಮನ್ನಾ ಮಾಡದೇ ಪಲಾಯನವಾದ ಮಾಡುತ್ತಿದ್ದಾರೆ. ಈ ಸಮ್ಮಿಶ್ರ ಸರ್ಕಾರ ರೈತರಿಗೆ ಮೋಸ, ವಂಚನೆ ಮಾಡುತ್ತಿದೆ. ಕುಮಾರಸ್ವಾಮಿ ಮತ್ತೊಮ್ಮೆ ವಚನಭ್ರಷ್ಟನೆಂಬ ಬಿರುದು ಪಡೆದಿದ್ದಾರೆ. ರಾಜ್ಯದಲ್ಲಿ ಸರ್ಕಾರ ಇದೆ ಅನ್ನೋ ಭಾವನೆ ಜನರಿಗೆ ಇನ್ನೂ ಬರ್ತಿಲ್ಲ. ಕಾಂಗ್ರೆಸ್- ಜೆಡಿಎಸ್ ನಾಯಕರು ಅಧಿಕಾರಕ್ಕಾಗಿ ಜಗ್ಗಜಗ್ಗಾಟ ನಡೆಸುತ್ತಿದ್ದಾರೆ. ಇಡೀ ಕರ್ನಾಟಕ ರಾಜ್ಯದ ಅಭಿವೃದ್ಧಿ ಬಗ್ಗೆ ಸಮ್ಮಿಶ್ರ ಸರ್ಕಾರಕ್ಕೆ ಕಾಳಜಿಯಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಅಭಿವೃದ್ಧಿ ಬಗ್ಗೆ ಫಿಟ್ ಆಗಿದ್ದೇವೆಂದು ಸಿಎಂ ಹೆಚ್ ಡಿಕೆ ಟ್ವೀಟ್ ಮಾಡಿದ್ದಾರೆ. ಹೆಚ್ ಡಿಕೆ ಈಗ ಅಧಿಕಾರಕ್ಕೆ ಬಂದು 1 ತಿಂಗಳೂ ಆಗಿಲ್ಲ, ಏನ್ ಫಿಟ್ ಆಗಿದ್ದೀರಿ. ಹೆಚ್ ಡಿಕೆ ತಾವೂ ಫಿಟ್ ಇಲ್ಲ, ರಾಜ್ಯದ ಅಭಿವೃದ್ಧಿಯೂ ಫಿಟ್ ಆಗಿಲ್ಲ.  ಭಿನ್ನಮತದ ಲಾಭ ಪಡೆಯೋದಕ್ಕೆ ಬಿಜೆಪಿ ಯಾವುದೇ ಕಾರಣಕ್ಕೂ ಮುಂದಾಗಲ್ಲ. ಕಾಂಗ್ರೆಸ್- ಜೆಡಿಎಸ್ ಅವರರವರೇ ಕಾದಾಡಿಕೊಂಡು ಸರ್ಕಾರ ಬಿದ್ದು ಹೋಗುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.