WATCH : ಪೊಲೀಸರಿಂದ ದೂರವಾದ ಪ್ರೇಯಸಿ, ಸೆಲ್ಫೀ ವಿಡಿಯೋ ಮಾಡಿ ಮಾಯವಾದ ಪ್ರೇಮಿ…!

ದಾವಣಗೆರೆ : ಮದುವೆಯಾದ ಪ್ರೇಮಿಗಳನ್ನು ಪೊಲೀಸರು ಹಾಗೂ ಪೋಷಕರು ದೂರ ಮಾಡಿದ ಹಿನ್ನಲೆ ಯುವಕ ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಬಳಿಕ ನಾಪತ್ತೆಯಾದ ಘಟನೆ ದಾವಣಗೆಯಲ್ಲಿ ನಡೆದಿದೆ.

ಜಿಲ್ಲೆಯ ಲೋಕಿಕೆರೆ ಗ್ರಾಮದ ಯುವತಿ ಕಾವ್ಯಶ್ರೀ ಬಳ್ಳಾರಿ ಯ ರಾಜೇಂದ್ರ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಕಾವ್ಯಶ್ರೀ ಮನೆಯಲ್ಲಿ ಬೇರೆ ಯುವಕನ ಜೊತೆ ಮದುವೆ ತಯಾರಿ ನಡೆದಿದ್ದು. ಇದರಿಂದ ಪ್ರೇಮಿಗಳಿಬ್ಬರು ಮನೆ ಬಿಟ್ಟು ಹೋಗಿ ಚಿತ್ರದುರ್ಗದ ಚಳ್ಳಕೆರೆ ಯಲ್ಲಿರುವ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು.

ನಂತರ ಯುವಕನ ಮನೆಗೆ ಕರೆದುಕೊಂಡು ಹೋಗಿ ಬಳ್ಳಾರಿಯ ಮಹಿಳಾ ಠಾಣೆಯಲ್ಲಿ ಯುವತಿಯಿಂದ ನಾನು ಯುವಕನನ್ನು ಒಪ್ಪಿ ಮದುವೆಯಾಗುವುದಾಗಿ ಮುಚ್ಚಳಿಕೆ ಪತ್ರವನ್ನು ಪೊಲೀಸರು ಬರೆಸಿಕೊಂಡಿದ್ದರು. ಎರಡು ದಿನಗಳ ಹಿಂದೆ ದಾವಣಗೆರೆಯ ಹದಡಿ ಠಾಣೆಯ ಪೊಲೀಸರು ವಿಚಾರಣೆಗೆಂದು ಕೆರಸಿದ್ದು, ಪ್ರೇಮಿಗಳಿಬ್ಬರನ್ನು ದೂರ ಮಾಡಿದ್ದಾರೆ. ಪ್ರೇಯಸಿ ದೂರವಾಗಿದ್ದರಿಂದ ಮನನೊಂದ ಪ್ರೇಮಿ ರಾಜೇಂದ್ರ, ತಾಯಿಗೆ ಸೆಲ್ಫಿ ವೀಡಿಯೋ ಕಳಿಸಿ ನೋವನ್ನು ಹೇಳಿಕೊಂಡಿದ್ದಾನೆ. ಪೊಲೀಸರು ಹಾಗೂ ಆಕೆಯ ಪೋಷಕರು ನಮ್ಮಿಬ್ಬರನ್ನು ದೂರ ಮಾಡಿದ್ದಾರೆ. ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು ಉಳಿಯುವುದು ವೇಸ್ಟ್. ನನ್ನನ್ನು ಕ್ಷಮಿಸಿ ಎಂದು ತಾಯಿಗೆ ವೀಡಿಯೋ ಕಳುಹಿಸಿದ್ದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಇದರಿಂದ ಆತಂಕಗೊಂಡ ತಾಯಿ ಪುಷ್ಪ ಮಗನನ್ನು ಹುಡುಕಾಟ ನಡೆಸುತ್ತಿದ್ದು,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com