ನಿಮ್ಮ ಬುಡಬುಡಕಿ ಆಟ ಕಾಂಗ್ರೆಸ್‌ನಲ್ಲಿ ನಡೆಯಲ್ಲ : M.B ಪಾಟೀಲ್‌ಗೆ ಶಾಮನೂರು ಟಾಂಗ್‌

ದಾವಣಗೆರೆ : ಮಂತ್ರಿಗಿರಿಗಾಗಿ ಬಂಡಾಯವೆದ್ದಿರುವ ಮಾಜಿ ಸಚಿವ ಎಂ.ಬಿ ಪಾಟೀಲ್‌ ಅವರಿಗೆ ಶಾಮನೂರು ಶಿವಶಂಕರಪ್ಪ ಟಾಂಗ್ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಶಾಮನೂರು ಶಿವಶಂಕರಪ್ಪ, ಸಚಿವ ಸ್ಥಾನಕ್ಕೆ ಪಕ್ಷದಲ್ಲಿ ಒತ್ತಡ ಹೇರುತ್ತಿರುವ ಶಾಸಕ ಎಂ.ಬಿ.ಪಾಟೀಲ್ ಬುಡಬುಡಕಿ ಆಟ ಕಾಂಗ್ರೆಸ್ ನಲ್ಲಿ ನಡೆಯಲ್ಲ. ಅಲ್ಲದೇ ಪಕ್ಷದಲ್ಲಿ ಒತ್ತಡ ತಂತ್ರ ಕೆಲಸ ಮಾಡಲ್ಲ ಎಂದಿದ್ದಾರೆ. ನಾನು ಸಚಿವ ಸ್ಥಾನದ ಹಿಂದೆ ಬಿದ್ದಿಲ್ಲ. ಸಚಿವ ಸ್ಥಾನಕ್ಕಿಂತ ಹೆಚ್ಚಾಗಿ ದಾವಣಗೆರೆ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಮಾಡುತ್ತೇನೆ. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಯಾವುದೇ ಷರತ್ತುಗಳು ಬೇಡ. ಹೋರಾಟಕ್ಕೆ ಹೊಂದಾಣಿಕೆ ಮಾತ್ರ ಅಗತ್ಯ ಎಂದಿದ್ದಾರೆ.

ಅಲ್ಲದೆ ನಾನು ಸಚಿವ ಸ್ಥಾನ ಹಿಂದೆ ಬಿದ್ದಿಲ್ಲ. ಸಚಿವ ಸ್ಥಾನಕ್ಕೂ ಹೆಚ್ಚಾಗಿ ದಾವಣಗೆರೆ ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.

Leave a Reply

Your email address will not be published.