ಬಳ್ಳಾರಿ : ಕಾರ್ – ಬಸ್ ನಡುವೆ ಭೀಕರ ಅಪಘಾತ : ಮಗು ಸೇರಿ ಐವರ ದುರ್ಮರಣ

ಬಳ್ಳಾರಿ : ಇಂಡಿಕಾ ಕಾರು ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ೮ ವರ್ಷದ ಮಗು ಸೇರಿ ಐವರು ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಕೋಳೂರು ಕ್ರಾಸ್ ಬಳಿ ನಡೆದಿದೆ.

ಸಿರಗುಪ್ಪ ಕಡೆ ತೆರಳುತ್ತಿದ್ದ ಬಸ್ ಹಾಗೂ ಬಳ್ಳಾರಿಗೆ ಬರುತ್ತಿದ್ದ ಇಂಡಿಕಾ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಮೃತರು ಯಾವ ಊರಿನವರು ಎನ್ನುವ ಬಗ್ಗೆ ಮಾಹಿತಿ ‌ಇಲ್ಲ. ಕಾರಿನಡಿ ಸಿಲುಕಿದ ದೇಹ ಹೊರ ತೆಗೆಯಲು ಹರ ಸಾಹಸ ಪಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಕುರುಗೋಡು ಪೊಲೀಸರ ಭೇಟಿ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com