ಮದುಮಗನಿಗೆ ಕೈ ಕೊಟ್ಟು ಮದುವೆ ದಿನವೇ ಪ್ರಿಯಕರನೊಂದಿಗೆ ಪರಾರಿಯಾದ ವಧು..!

ದೊಡ್ಡಬಳ್ಳಾಪುರ : ಮದುವೆ ದಿನವೇ ನಾಪತ್ತೆಯಾದ ವಧು ನಾಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಮದುವೆಯಾಗಬೇಕಿದ್ದ ವಧು ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಕಲ್ಯಾಣ ಮಂಟಪಕ್ಕೆ ವಧುವಿನ ಕಡೆಯವರು ಬಾರದೇ ಇದ್ದುದರಿಂದ, ವಧು ಇಲ್ಲದೆ ಮದುವೆ ಮುರಿದು ಬಿದ್ದಿದೆ.

ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಬಳಿಯ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಮದುವೆ ನಿಗದಿಯಾಗಿತ್ತು. ಕೆಂಗೇರಿಯ ಪಲ್ಲವಿ ಎನ್ ಜೊತೆ ದೊಡ್ಡಬಳ್ಳಾಪುರ ತಾಲೂಕಿನ ಭೂಮೇನಹಳ್ಳಿಯ ರಮೇಶ್ ಜಿ ಎನ್ ಮದುವೆ ನಿಶ್ಚಯವಾಗಿತ್ತು.

ನಿನ್ನೆ ರಾತ್ರಿ ವಧುವಿನ ಕಡೆಯವರಿಗಾಗಿ ವರನ ಕಡೆಯವರು ಕಾಯುತ್ತ ಕುಳಿತಿದ್ದರು. ವಧು ಕಾಣೆಯಾಗಿದ್ದಾಳೆಂದು ಹೇಳಿ ಕಲ್ಯಾಣ ಮಂಟಪಕ್ಕೆ ಹೆಣ್ಣಿನ ಕಡೆಯವರು ಬರಲೇ ಇಲ್ಲ. ಮದುವೆಗಾಗಿ ವರ 5 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದ. ಮದುವೆ ಆರತಕ್ಷತೆ ಮಾಡಿದ ಲಕ್ಷಾಂತರ ರೂಪಾಯಿಯ ಆಡುಗೆ ಹಾಳಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com