Cricket : ಟೀಮ್ ಇಂಡಿಯಾ ಕೋಚ್‍ಗಳಿಗೆ BCCI ನೀಡುವ ವೇತನವೆಷ್ಟು..? : ಕೇಳಿದ್ರೆ ಶಾಕ್ ಆಗ್ತೀರಾ..

ಭಾರತದಲ್ಲಿ ಕ್ರಿಕೆಟ್ ಎಂಬುದು ಬರೀ ಒಂದು ಆಟವಷ್ಟೇ ಅಲ್ಲ.. ಕ್ರಿಕೆಟ್ ಅನ್ನು ತನ್ನಷ್ಟಕ್ಕೇ ತಾನೇ ಒಂದು ಧರ್ಮದಂತೆ, ಆಟಗಾರರನ್ನು ದೇವರೆಂಬಂತೆ ಕಾಣುವಷ್ಟರ ಮಟ್ಟಿಗೆ ಅತಿರೇಕದ ಅಭಿಮಾನವಿದೆ. ಈ ಅಭಿಮಾನದ ದೆಸೆಯಿಂದಲೇ ಕ್ರಿಕೆಟ್ ಆಡುವ ಎಲ್ಲ ದೇಶಗಳಲ್ಲಿ ಬಿಸಿಸಿಐ ಅತ್ಯಂತ ಶ್ರೀಮಂತ ಆಡಳಿತ ಸಂಸ್ಥೆ ಎನಿಸಿಕೊಂಡಿದೆ. ಬಿಸಿಸಿಐ ನಡೆಸುವ ಐಪಿಎಲ್ ಟೂರ್ನಿಯಲ್ಲಂತೂ ಅಕ್ಷರಶಃ ಹಣದ ಹೊಳೆಯೇ ಹರಿಯುತ್ತದೆ..

Image result for BCCI and Money

ಈ ಶ್ರೀಮಂತ ಸಂಸ್ಥೆ ಬಿಸಿಸಿಐ ಕ್ರಿಕೆಟ್ ಆಟಗಾರರಿಗೆ, ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ವೇತನ ನೀಡುತ್ತದೆ. ಬಿಸಿಸಿಐ ಟೀಮ್ ಇಂಡಿಯಾ ಕೋಚ್ ಗಳಿಗೆ ನೀಡುವ ವೇತನವೆಷ್ಟು ಎಂಬುದರ ಬಗ್ಗೆ ಒಮ್ಮೆಯಾದರೂ ಯೋಚಿಸಿರಬೇಕು. ಇಲ್ಲಿದೆ ವಿವರ..

Related image

ಸದ್ಯ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿರುವ ರವಿಶಾಸ್ತ್ರಿವರಿಗೆ ವೇತನದ ರೂಪದಲ್ಲಿ ಬಿಸಿಸಿಐ 18937500.00 ರೂಪಾಯಿಗಳನ್ನು ನೀಡಿದೆ. ಇದು ಏಪ್ರಿಲ್ 18 ರಿಂದ ಜುಲೈ 17 ರವರೆಗೆ ಅಂದರೆ 3 ತಿಂಗಳು ಕೋಚ್ ಆಗಿ ಸೇವೆ ಸಲ್ಲಿಸಲು ನೀಡಿರುವ ಸಂಭಾವನೆಯಾಗಿದೆ. ಅಂದರೆ ಒಂದು ತಿಂಗಳಿಗೆ ಬರೋಬ್ಬರಿ 63 ಲಕ್ಷ ರೂಪಾಯಿ ವೇತನ ಆಗುತ್ತದೆ.

ಸದ್ಯ ಅಂಡರ್-19 ತಂಡಕ್ಕೆ ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾರೆ. ರಾಹುಲ್ ದ್ರಾವಿಡ್  ಅವರಿಗೆ ಬಿಸಿಸಿಐ ಪ್ರತಿ ತಿಂಗಳು 4050000.00 (40 ಲಕ್ಷದ 50 ಸಾವಿರ) ರೂಪಾಯಿ ವೇತನ ನೀಡುತ್ತದೆ. ಅಂದರೆ ವಾರ್ಷಿಕವಾಗಿ 48600000 (4 ಕೋಟಿ 86 ಲಕ್ಷ) ರೂಪಾಯಿ ಆಗುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com