ಕಾಂಗ್ರೆಸ್‌ನ ಟ್ರಬಲ್‌ ಶೂಟರ್‌ ಡಿಕೆಶಿ ಬಗ್ಗೆ ಭವಿಷ್ಯ ನುಡಿದ ಸ್ವಾಮೀಜಿ…..ಹೇಳಿದ್ದೇನು?

ಬೆಂಗಳೂರು : ಕಾಂಗ್ರೆಸ್‌ ಪಕ್ಷವನ್ನು ಎಲ್ಲಾ ಆಪತ್ತುಗಳಿಂದ ಪಾರು ಮಾಡಿದ್ದ ಟ್ರಬಲ್‌ ಶೂಟರ್‌ ಡಿ.ಕೆ ಶಿವಕುಮಾರ್‌ಗೆ ಕಾಡು ಸಿದ್ಧೇಶ್ವರ ಮಠದ ಶಿವಯೋಗಿ ಸ್ವಾಮೀಜಿ ಸಲಹೆ ನೀಡಿದ್ದಾರೆ.

ತಮಗೆ ಇಂತದ್ದೇ ಖಾತೆ ಬೇಕು ಎಂದು ಅಪೇಕ್ಷೆ ಪಡಬೇಡಿ. ಇರುವ ಖಾತೆಯಲ್ಲೇ ನಿಷ್ಠೆಯಿಂದ ಮುಂದುವರಿಯಿರಿ. ನಿಮಗೆ ಯಶಸ್ಸು ಸಿಗುತ್ತದೆ ಎಂದು  ಸಲಹೆ ನೀಡಿದ್ದಾರೆ.

ತಮ್ಮ ಪಾಲಿಗೆ ಬರುವ ಖಾತೆಯನ್ನು ಸ್ವೀಕರಿಸಲಿ. ಆದರೆ ಇಂತದ್ದೇ ಖಾತೆ ಬೇಕು ಎನ್ನುವುದು ಬೇಡ. ಯಾವ ಖಾತೆಯಾದರೇನು, ಕಾಯಕವೇ ಕೈಲಾಸ ಎಂಬ ಹಾಗೆ  ಕೆಲಸ ಮಾಡಲಿ, ಈ ರೀತಿ ಮಾಡಿದ್ದೇ ಆದರೆ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಮುಂದೊಂದು ದಿನ ಉನ್ನತ ಮಟ್ಟಕ್ಕೇರುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಕೆಲವು ಶಾಸಕರು ತಮಗೆ ಸಚಿವ ಸ್ಥಾನ ನೀಡಲಿಲ್ಲ ಎಂದು ಬೇಸರ ಮಾಡಿಕೊಂಡರೆ ಇನ್ನೂ  ಕೆಲ ಸಚಿವರು ತಮಗೆ ನೀಡಿರುವ ಖಾತೆ ಬೇಡ ಬೇರೆಯೇ ಖಾತೆ ಬೇಕು, ತಾವು ಕೇಳಿದ ಖಾತೆಯನ್ನು ನೀಡಬೇಕು ಎಂದು ಪಟ್ಟು ಹಿಡಿದಿದ್ದು, ಈ ಹಿನ್ನೆಲೆಯಲ್ಲಿ ಸ್ವಾಮೀಜಿಗಳು ಸಲಹೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com