2ನೇ ದಿನಕ್ಕೆ ಅಂತ್ಯಗೊಂಡ ಐತಿಹಾಸಿಕ ಟೆಸ್ಟ್ : ಪದಾರ್ಪಣೆ ಪಂದ್ಯದಲ್ಲಿ ಕ್ರಿಕೆಟ್ ಶಿಶುಗಳಿಗೆ ಆಘಾತ

ಭಾರತ ಹಾಗೂ ಅಫಘಾನಿಸ್ತಾನ ತಂಡಗಳ ನಡುವೆ ಐತಿಹಾಸಿಕ ಟೆಸ್ಟ್ ಪಂದ್ಯ ಎರಡೇ ದಿನಕ್ಕೆ ಮುಕ್ತಾಯಗೊಂಡಿದೆ. ಜಾಗತಿಕ ಕ್ರಿಕೆಟ್ ನಲ್ಲಿ ತನ್ನ ಪುಟ್ಟ ಯಶಸ್ಸಿನ ಹೆಜ್ಜೆಗಳನ್ನಿಡುತ್ತಿರುವ ಅಫಘಾನಿಸ್ತಾನಕ್ಕೆ ಪಾದಾರ್ಪಣೆಯ ಟೆಸ್ಟ್ ಎಂಬ ಕಾರಣಕ್ಕೆ ಈ ಪಂದ್ಯ ಮಹತ್ವ ಪಡೆದುಕೊಂಡಿತ್ತು.

Image result for india afghanistan test match

ಭಾರತ ಭಾಗವಹಿಸಿದ, ಎರಡನೇ ದಿನಕ್ಕೇ ಮುಕ್ತಾಯಗೊಂಡ ಮೊದಲ ಟೆಸ್ಟ್ ಇದಾಗಿದೆ. ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ 22 ಟೆಸ್ಟ್ ಪಂದ್ಯಗಳು 2ನೇ ದಿನಕ್ಕೆ ಅಂತ್ಯ ಕಂಡಿವೆ.

ಮೊದಲ ಪಂದ್ಯದಲ್ಲಿಯೇ ಕ್ರಿಕೆಟ್ ಶಿಶುಗಳಿಗೆ ಸೋಲಿನ ಆಘಾತ ಎದುರಾಗಿದೆ. ಭಾರತೀಯ ಸ್ಪಿನ್ ಬೌಲರ್ಗಳ ದಾಳಿಗೆ ಸಿಲುಕಿದ ಅಫಘಾನಿಸ್ತಾನ, ಒಂದೇ ದಿನದಾಟದಲ್ಲಿ ತನ್ನ ಎರಡೂ ಇನ್ನಿಂಗ್ಸ್ ಗಳಲ್ಲಿ ಆಲೌಟ್ ಆಯಿತು. ಇದರೊಂದಿಗೆ ಅಸ್ಘರ್ ಸ್ಟಾನಿಕ್ ಜಾಯ್ ನೇತೃತ್ವದ ಅಫ್ಘನ್ ತಂಡ ಇನ್ನಿಂಗ್ಸ್ ಹಾಗೂ 262 ರನ್ ಗಳಿಂದ ಹೀನಾಯ ಸೋಲನ್ನು ಕಂಡಿದೆ.

Image result for india afghanistan test match

ಅನುಭವಿ ಸ್ಪಿನ್ನರುಗಳಾದ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಎದುರಾಳಿ ತಂಡದ ಬ್ಯಾಟ್ಸಮನ್ ಗಳನ್ನು ಇನ್ನಿಲ್ಲದಂತೆ ಕಾಡಿದರು. ಹಶ್ಮತುಲ್ಲಾಹ್ ಶಾಹಿದಿ (36) ಹಾಗೂ ನಾಯಕ ಅಸ್ಘರ್ ಸ್ಟಾನಿಕ್ ಜಾಯ್ (25) ಎರಡನೇ ಇನ್ನಿಂಗ್ಸ್ ನಲ್ಲಿ ಕೊಂಚ ಮಟ್ಟಿನ ಪ್ರತಿರೋಧ ತೋರಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com