ನಟಿ ಹರಿಪ್ರಿಯಾ ಮಾಡಿರುವ ಈ ಕೆಲಸಕ್ಕೆ ಯಾರಾದರೂ ಭೇಷ್‌ ಎನ್ನಲೇ ಬೇಕು….

ಬೆಂಗಳೂರು : ಗುರುವಾರ… ಜೂನ್‌ 14ರಂದು ವಿಶ್ವ ರಕ್ತದಾನ ದಿನ. ಈ ದಿನದಂದು ರಕ್ತದಾನ ಮಾಡಿ ಇತರರ ಜೀವ ಉಳಿಸಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ  ಪ್ರತೀ ವರ್ಷ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತದೆ.

ಇದೇ ದಿನ  ನಟಿ ಹರಿಪ್ರಿಯಾ ಸಹ ರಕ್ತದಾನ ಮಾಡಿ ಗರ್ಭಿಣಿಯೊಬ್ಬರ ಜೀವ ಉಳಿಸಿದ್ದಾರೆ.  ಗುರುವಾರ ಬೆಳಗ್ಗೆ ತುರ್ತಾಗಿ ರಕ್ತ ಬೇಕಾಗಿದೆ ಎಂಬ ಪೋಸ್ಟ್ ನೋಡಿದ  ಹರಿಪ್ರಿಯಾ, ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿದ್ದಾರೆ. ಮೊದಲ ಬಾರಿಗೆ ಹರಿಪ್ರಿಯಾ ರಕ್ತದಾನ ಮಾಡಿದ ಹಿನ್ನೆಲೆಯಲ್ಲಿ ಸ್ವಲ್ಪ ಗಾಬರಿಯಾಗಿದ್ದರು.

ಹೆರಿಗೆ ವೇಳೆ ಮಹಿಳೆಯೊಬ್ಬರಿಗೆ  ತೀವ್ರ ರಕ್ತಸ್ರಾವವಾಗಿದ್ದು, ಅವರಿಗೆ ರಕ್ತದ ಅವಶ್ಯಕತೆ ಇತ್ತು. ಹರಿಪ್ರಿಯಾ ಆ ಮಹಿಳೆಗೆ ರಕ್ತದಾನ ಮಾಡಿದ್ದು, ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಈ ಕುರಿತು ನಟಿ ಹರಿಪ್ರಿಯಾ ಇನ್ಸ್ಟಾಗ್ರಾಂ ನಲ್ಲಿ ರಕ್ತದಾನ ಮಾಡಿ ಜೀವ ಉಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಹರಿಪ್ರಿಯಾರ ಈ ಕೆಲಸಕ್ಕೆ ಅನೇಕರು ಶಹಬ್ಬಾಶ್ ಹೇಳಿದ್ದು, ಇತರರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಹೊಗಳುತ್ತಿದ್ದಾರೆ.

Leave a Reply

Your email address will not be published.