ದೆಹಲಿ ಸಮಸ್ಯೆ ಪರಿಹಾರ ಮಾಡುವುದನ್ನು ಬಿಟ್ಟು ಇದೆಂತಾ ಕೆಲಸ ಮಾಡುತ್ತಿದೆ ಮೋದಿ ಸರ್ಕಾರ..?

ದೆಹಲಿ : ಐಎಎಸ್ ಅಧಿಕಾರಿಗಳು ನಡೆಯುತ್ತಿರುವ ಮುಷ್ಕರವನ್ನು ಅಂತ್ಯಗೊಳಿಸುವ ಬದಲು ಸರ್ಕಾರವನ್ನೇ ವಿಸರ್ಜಿಸಲು ಮೋದಿ ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು, ಇದಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ಲೆಪ್ಟಿನೆಂಟ್‌ ಗವರ್ನರ್ ನಿವಾಸದಲ್ಲಿ  ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಸೇರಿದಂತೆ ಪ್ರಮುಖರು ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ. ಐಎಎಸ್ ಅಧಿಕಾರಿಗಳ ಪ್ರತಿಭಟನೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ದೆಹಲಿ ಸಿಎಂ ಕೇಜ್ರಿವಾಲ್, ಮನೀಷ್ ಸಿಸೋಡಿಯಾ, ಗೋಪಾಲ್ ರೈ ಹಾಗೂ ಸತ್ಯೇಂದ್ರ ಜೈನ್ ಸೋಮವಾರದಿಂದ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ನಿವಾಸಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ.  ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಕೇಜ್ರಿವಾಲ್, ಐಎಎಸ್ ಅಧಿಕಾರಿಗಳು ಪ್ರತಿಭಟನೆ ನಡೆಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ತಾವು ಮಧ್ಯಪ್ರವೇಶಿಸಬೇಕೆಂದು ಕೋರಿದ್ದರು.
ಅಲ್ಲದೆ ಕಳೆದ ಒಂದು ವಾರದಿಂದ ಐವರು ಆಪ್‌ ನಾಯಕರು ಲೆಫ್ಟಿನಂಟ್ ಗವರ್ನರ್ ಅನಿಲ್‌  ಬೈಜಲ್‌ ಅವರ ನಿವಾಸದಲ್ಲೇ ಕಾದು ಕುಳಿ ತಿದ್ದು, ಒಂದು ವಾರದಿಂದ ಸರ್ಕಾರದ ಯಾವುದೇ ಕೆಲಸ ನಡೆಯುತ್ತಿಲ್ಲ. ಅಲ್ಲದೆ ಸಚಿವರ ಕುಟುಂಬಸ್ಥರನ್ನೂ  ಲೆಫ್ಟಿನಂಟ್‌ ಗವರ್ನರ್ ಅವರ ನಿವಾಸದೊಳಕ್ಕೆ ಬಿಡುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನು ಈ ವಿಚಾರ ಸಂಬಂಧ ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿರುವುದಾಗಿ ಹೇಳಲಾಗುತ್ತಿದ್ದು, ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೆಹಲಿ ಸರ್ಕಾರದ ಸಮಸ್ಯೆಯನ್ನು ಬಗೆಹರಿಸುವುದನ್ನು ಬಿಟ್ಟು ದೆಹಲಿ ಸರ್ಕಾರವನ್ನು ಕೆಡವಲು ಸಿದ್ಧತೆ ನಡೆಸುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳು ವೈರಲ್‌ ಆಗುತ್ತಿವೆ.

2 thoughts on “ದೆಹಲಿ ಸಮಸ್ಯೆ ಪರಿಹಾರ ಮಾಡುವುದನ್ನು ಬಿಟ್ಟು ಇದೆಂತಾ ಕೆಲಸ ಮಾಡುತ್ತಿದೆ ಮೋದಿ ಸರ್ಕಾರ..?

Leave a Reply

Your email address will not be published.

Social Media Auto Publish Powered By : XYZScripts.com