ಬೆಳಗಾವಿ : ಸ್ಕೇಟಿಂಗ್​ನಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ : ಕುಂದಾನಗರಿ ಯುವಕನ ಮಹತ್ತರ ಸಾಧನೆ

ಬೆಳಗಾವಿ : ಕುಂದಾನಗರಿಯ ಈ ಯುವಕ ಅಭಿಷೇಕ ನವಿಲೆ ಕಡುಬಡತನದಲ್ಲಿ  ಬೆಳೆದು ಸ್ಕೇಟಿಂಗ್​ನಲ್ಲಿ  ಅಂತರಾಷ್ಟ್ರಿಯ ಮಟ್ಟದಲ್ಲಿ ಖ್ಯಾತಿಗೊಳಿಸಿದ್ದಾನೆ. ಇತನ ಸಾಧನೆ ಈಗ ವರ್ಲ್ಡ್ ರೆಕಾರ್ಡ್​ಗೆ ಸೇರಿದೆ.

ಅಭಿಷೇಕ ನವಲೆ 2018 ಫೆಬ್ರವರಿ 26ರಂದು 100 ಮೀಟರ್ ಇನ್ ಲೈನ್ ಸ್ಕೇಟಿಂಗ್ ವಿಭಾಗದಲ್ಲಿ 16.9 ಸೆಕೆಂಟ್ ನಲ್ಲಿ ಕ್ರಮಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಗಿನ್ನಿಸ್ ವರ್ಡ್ ರೆಕಾರ್ಡ್ ಅಧಿಕಾರಿಗಳು 20 ಸೆಕೆಂಡ್ ಟಾರ್ಗೆಟ್ ನೀಡಿದ್ದರು. ಆದರೇ ಅಭಿಷೇಕ ಕೇವಲ 19.6 ಸೆಕೆಂಟ್ ನಲ್ಲಿಯೇ ದಾಖಲೆ ಮಾಡಿದ್ದನು. ಅಂದು ಗಿನ್ನಿಸ್ ರೆಕಾರ್ಡ್ ಮಾಡಿಕೊಂಡಿದ್ದ ಅಧಿಕಾರಿಗಳು ಇತ್ತೀಚಿಗೆ ಅಭಿಷೇಕ ನವಲೆಗೆ ಗಿನ್ನಿಸ್ ವರ್ಡ್ ರೆಕಾರ್ಡ್ ಪ್ರಮಾಣ ಪತ್ರ ನೀಡಿದ್ದಾರೆ.

ಇದು ಕುಂದನಗರಿ ಬೆಳಗಾವಿಗೆ ಹೆಸರನ್ನು ಅಂತರಾಷ್ಟೀಯಮಟ್ಟಕ್ಕೆ ತೆಗೆದುಕೊಂಡು  ಹೋಗಿರುವುದು ಹೆಮ್ಮೆಯ ವಿಷಯವಾಗಿದೆ.  ಈಗಾಗಲೇ ವರ್ಡ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಲಿಂಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಅಭಿಷೇಕ ನವಲೆ ಸಾಧನೆ ಮಾಡಿದ್ದಾರೆ. ಮುಂದೆ ನನಗೆ ಒಲಂಪಿಕ್ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಆಸೆ ಇದೆ ಎಂದು ಅಭಿಷೇಕ ನವಲೆ ಸಂತಸ ಹಂಚಿಕೊಂಡಿದ್ದಾರೆ.

ಅಭಿಷೇಕ ನವಿಲೆ ಕಡುಬಡತನದಲ್ಲಿ ಬೆಳೆದ ಪ್ರತಿಭೆ. ಸದ್ಯ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದಾನೆ. ತಂದೆ ಕೆಎಸ್ ಆರ್ ಟಿಸಿಯಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಭಿಷೇಕ 4ನೇ ವರ್ಷದಿಂದಲೇ ಕಾಲಿಗೆ ಸ್ಕೇಟಿಂಗ್ ಹವ್ಯಾಸ ಮಾಡಿಕೊಂಡಿದ್ದಾನೆ. ಪ್ರತಿ ದಿನ 4 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಾನೆ. ಅಭಿಷೇಕಗೆ ತರಬೇತುದಾರ ಸೂರ್ಯಕಾಂತ ಹಿಂಡಾಲ್ಕೆಗರ್ ಸೂಕ್ತ ಮಾರ್ಗದರ್ಶ ನೀಡುತ್ತಿದ್ದಾರೆ. ಇನ್ನ ಅಭಿಷೇಕ ನವಲೆಯ ಒಲಂಪಿಕ್ ಕನಸು ನನಸಾಗಲಿ ಎಂದು ಎಲ್ಲರೂ ಹಾರೈಸೊಣ..

Leave a Reply

Your email address will not be published.

Social Media Auto Publish Powered By : XYZScripts.com